‘ಸು ಫ್ರಮ್ ಸೋ’ ಬಳಿಕ ಮತ್ತೊಂದು ಹಿಟ್ ಸಿನಿಮಾ; ‘ಏಳುಮಲೆ’ ಕಲೆಕ್ಷನ್ ಎಷ್ಟು ಗೊತ್ತಾ..??
‘ಸು ಫ್ರಮ್ ಸೋ’ ಸಿನಿಮಾದ ಯಶಸ್ಸಿನ ನಂತರ ಬಿಡುಗಡೆಯಾದ ‘ಏಳುಮಲೆ’ ಸಿನಿಮಾ (Elu Male) ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ರಾಣಾ ಅಭಿನಯದ ಈ ಸಿನಿಮಾ ನೈಜ ಘಟನೆ ಆಧಾರಿತ ಥ್ರಿಲ್ಲರ್ ಆಗಿದ್ದು, ಬಿಡುಗಡೆಯಾಗಿ 10 ದಿನಗಳಲ್ಲಿ ಉತ್ತಮ ಕಲೆಕ್ಷನ್ ದಾಖಲಿಸಿದೆ.
ಬಾಕ್ಸ್ ಆಫೀಸ್ ವರದಿ
- ಒಟ್ಟಾರೆ ಗಳಿಕೆ: ₹3.5 ಕೋಟಿ (ಅಂದಾಜು)
- ಸೆಪ್ಟೆಂಬರ್ 14 (ಭಾನುವಾರ): ₹40 ಲಕ್ಷ
- ಸೆಪ್ಟೆಂಬರ್ 15 (ಸೋಮವಾರ): ₹11 ಲಕ್ಷ
ಈ ಸಿನಿಮಾ ಪ್ರತಿದಿನವೂ ಲಕ್ಷಗಳಲ್ಲಿ ಕಲೆಕ್ಷನ್ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಗಳಿಕೆ ಮಾಡುವ ಸಾಧ್ಯತೆ ಇದೆ ಎಂದು ಟ್ರೇಡ್ ವಿಶ್ಲೇಷಕರು ತಿಳಿಸಿದ್ದಾರೆ.
ತರುಣ್ ಸುಧೀರ್ ಅವರು ನಿರ್ದೇಶಕನಾಗಿ ಜನಪ್ರಿಯತೆ ಪಡೆದವರು. ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ಒಳ್ಳೊಳ್ಳೆಯ ಚಿತ್ರಗಳನ್ನು ಅವರು ಪ್ರೇಕ್ಷಕರ ಮುಂದಿಡೋ ಪ್ರಯತ್ನ ಮಾಡುತ್ತಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡೋದು ಅವರ ಮುಖ್ಯ ಉದ್ದೇಶ. ಈಗ ‘ಏಳುಮಲೆ’ ಚಿತ್ರದಲ್ಲಿ ರಾಣಾ, ಪ್ರಿಯಾಂಕಾ ಆಚಾರ್ಗೆ ಅವಕಾಶ ನೀಡಿದ್ದಾರೆ. ಇವರ ಜೊತೆ ಹಿರಿಯ ಕಲಾವಿದರಾದ ಜಗಪತಿ ಬಾಬು, ಕಿಶೋರ್ ಕುಮಾರ್, ಟಿಎಸ್ ನಾಗಾಭರಣ ನಟಿಸಿದ್ದಾರೆ. ಪುನಿತ್ ರಂಗಸ್ವಾಮಿ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಜೆಟ್ ಎಷ್ಟು ಎಂಬುದನ್ನು ತರುಣ್ ಸುಧೀರ್ ಅವರು ಬಿಟ್ಟುಕೊಟ್ಟಿಲ್ಲ. ಈಗ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಉತ್ತಮ ಗಳಿಕೆ ಮಾಡಿದೆ.
ನಿಮ್ಮ ಪ್ರತಿಕ್ರಿಯೆ ಏನು?