Crime News: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಧ್ಯರಾತ್ರಿ ಮಹಿಳೆ ಮೇಲೆ ಅತ್ಯಾಚಾರ..!

ಫೆಬ್ರವರಿ 21, 2025 - 16:00
 0  10
Crime News: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಧ್ಯರಾತ್ರಿ ಮಹಿಳೆ ಮೇಲೆ ಅತ್ಯಾಚಾರ..!

ಬೆಂಗಳೂರು: ಯಾವಾಗ ಓರ್ವ ಯುವತಿ ಮಧ್ಯ ರಾತ್ರಿ 12 ಗಂಟೆಗೆ ರಸ್ತೆ ಮೇಲೆ ಯಾವುದೇ ಭಯವಿಲ್ಲದೆ ಓಡಾಡುತ್ತಾಲೋ ಆಗಲೇ ದೇಶಕ್ಕೆ ಸ್ವಾತಂತ್ರ್ಯ ಬರೋದು ಎಂಬ ಮಾತೊಂದಿತ್ತು,. ಆದರೆ ಇಡೀ ದೇಶದಲ್ಲಿ ಈಗಲೂ ಹೆಣ್ಮಕ್ಕಳಿಗೆ ಯಾವುದೇ ಸುರಕ್ಷತೆ ಇಲ್ಲ. ದಿನಕ್ಕೊಂದು ರೇಪ್​ ಕೇಸ್​ಗಳು ದಾಖಲಾಗುತ್ತಿವೆ. ಇದೀಗ ಬೆಂಗಳೂರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ.

ಕೋರಮಂಗಲದಲ್ಲಿ ಪರಿಚಿತ ಮಹಿಳೆಯ ಮೇಲೆ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಘಟನೆ ಕೋರಮಂಗಲದ ಜ್ಯೋತಿ ನಿವಾಸ ಜಂಕ್ಷನ್ ಬಳಿ ನಿನ್ನೆ ಮಧ್ಯರಾತ್ರಿ 1.30 ವೇಳೆಗೆ ನಡೆದಿದೆ. ಮೂವರು ಸೇರಿಕೊಂಡು ಮಹಿಳೆಯನ್ನು ಹಿರಿದು ಮುಕ್ಕಿದ್ದಾರೆ ಎಂದು ತಿಳಿದುಬಂದಿದೆ.

ಕೋರಮಂಗಲದ ಖಾಸಗಿ ಹೊಟೆಲ್ ಟೆರೆಸ್ನಲ್ಲಿ ಕೃತ್ಯ ಎಸಗಿದ್ದಾರೆ. ಪರಿಚಯಸ್ಥ ಮಹಿಳೆಯನ್ನು ಒಬ್ಬ ಟೆರೇಸ್ ಮೇಲೆ ಕರೆದಿಕೊಂಡು ಹೋಗಿದ್ದಾರೆ. ವೇಳೆ ಇನ್ನಿಬ್ಬರು ಅಲ್ಲೇ ಕಾದು ಕುಳಿತು ಆತನೊಂದಿಗೆ ಸೇರಿಕೊಂಡು ಮೂವರು ಸೇರಿ ಸಾಮೂಹಿಕ ಆತ್ಯಾಚಾರ ಮಾಡಿದ್ದಾರೆ.

  ಘಟನೆಗೆ ಸಂಬಂಧಿಸಿದಂತೆ ಬೆಳಗ್ಗೆ 5 ಗಂಟೆಗೆ ಸಂತ್ರಸ್ತ ಮಹಿಳೆ  ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಜೊತೆಗೆ, ಮಹಿಳೆಯ ದೂರನ್ನು ಆಧರಿಸಿ ಕೋರಮಂಗಲ ಠಾಣೆಯಲ್ಲಿ ಆತ್ಯಾಚಾರ ಪ್ರಕರಣ ದಾಖಲು ಆಗಿದೆ. ಪ್ರಕರಣದ ಕುರಿತಂತೆ ಕೋರಮಂಗಲ ಪೊಲೀಸರು ಸದ್ಯ ಮೂವರನ್ನು ಅರೆಸ್ಟ್ ಮಾಡಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow