ನೀವು ಕೂಡ 10 ರುಪಾಯಿ ನಾಣ್ಯ ಹೊಂದಿದ್ದೀರಾ!? ಮೊದಲು ಈ ಸುದ್ದಿ ನೋಡಿ!

ಮೇ 4, 2025 - 08:14
 0  19
ನೀವು ಕೂಡ 10 ರುಪಾಯಿ ನಾಣ್ಯ ಹೊಂದಿದ್ದೀರಾ!? ಮೊದಲು ಈ ಸುದ್ದಿ ನೋಡಿ!

ಭಾರತದಲ್ಲಿ 10 ರೂಪಾಯಿ ನಾಣ್ಯದ ಬಗ್ಗೆ ಬಹಳ ದಿನಗಳಿಂದ ಗೊಂದಲವಿದೆ. ಇತ್ತೀಚಿನ ದಿನಗಳಲ್ಲಿ 10 ರೂಪಾಯಿ ನಾಣ್ಯ ಅಮಾನ್ಯ ಎಂಬ ತಪ್ಪು ಕಲ್ಪನೆ ಎಲ್ಲೆಡೆ ಹರಿದಾಡುತ್ತಿದೆ. ದಿನಸಿ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳಲ್ಲಿಯೂ ಈ ಕಾಯಿನ್‌ ಚಲಾವಣೆಯಾಗಬೇಕು, ಗ್ರಾಹಕರು ನೀಡಿದರೆ ತಗೆದುಕೊಳ್ಳಬೇಕು ಎಂದು ಆರ್‌ಬಿಐ ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಪ್ರಯೋಜನವಾಗುತ್ತಿಲ್ಲ

ಹೀಗಾಗಿ ಆರ್‌ಬಿಐ ಕ್ರಮಕ್ಕೆ ಮುಂದಾಗಿದ್ದು, ಹತ್ತು ರೂಪಾಯಿ ನಾಣ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಗ್ರಾಹಕರೊಂದಿಗೆ ಮಾತನಾಡಲು ಆರ್‌ಬಿಐ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. 

ಯಾವ 10 ರೂಪಾಯಿ ನಾಣ್ಯ ನಿಜ ಮತ್ತು ಯಾವುದು ನಕಲಿ? ಎಂದು ಗೊತ್ತೇ ಆಗುತ್ತಿಲ್ಲ. ಅನೇಕ ಸ್ಥಳಗಳಲ್ಲಿ, ಅಂಗಡಿಯವರು ಈ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ಏಕೆಂದರೆ ಅವರು 10 ಗೆರೆಗಳಿರುವ ನಾಣ್ಯಗಳು ನಿಜವಾದವು ಮತ್ತು 15 ಗೆರೆಗಳಿರುವ ನಾಣ್ಯಗಳು ನಕಲಿ ಎಂದು ನಂಬುತ್ತಾರೆ. ಆದರೆ ಇದರ ಹಿಂದಿನ ರಹಸ್ಯ ಇಲ್ಲಿದೆ ನೋಡಿ.

ನಾಣ್ಯಗಳ ಮುದ್ರಣವನ್ನು ಭಾರತ ಸರ್ಕಾರದ ಟಂಕಸಾಲೆಯಲ್ಲಿ ಮಾಡಲಾಗುತ್ತದೆ. ಕಾಲಕ್ಕೆ ತಕ್ಕಂತೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನಗಳಿಂದ ನಾಣ್ಯಗಳ ಮೇಲೆ ವಿವಿಧ ವಿನ್ಯಾಸಗಳನ್ನು ಚಿತ್ರಿಸಲಾಗಿದೆ. ಸಾರ್ವಜನಿಕರಲ್ಲಿ ಇರುವ ತಪ್ಪು ಕಲ್ಪನೆಗಳಿಂದಾಗಿ ಅನೇಕ ಜನರು 10 ರೂಪಾಯಿ ನಾಣ್ಯಗಳನ್ನು ಸ್ವೀಕರಿಸಲು ಹಿಂಜರಿಯುತ್ತಾರೆ. ₹ ಚಿಹ್ನೆ ಇರುವ ನಾಣ್ಯಗಳು ನಿಜವಾದವು ಎಂದು ಕೆಲವರು ನಂಬುತ್ತಾರೆ. ಇನ್ನು ಕೆಲವರು 10-ಸಂಖ್ಯೆಯ ನಾಣ್ಯಗಳು ಮಾತ್ರ ಮಾನ್ಯವಾಗಿರುತ್ತವೆ ಎಂದು ನಂಬುತ್ತಾರೆ.

ಇಲ್ಲಿಯವರೆಗೆ, ಒಟ್ಟು 14 ವಿಧದ ₹10 ನಾಣ್ಯಗಳನ್ನು ಪರಿಚಯಿಸಲಾಗಿದೆ. ಇದೇ ಕಾರಣದಿಂದ ಸಾಮಾನ್ಯ ಜನರಲ್ಲಿ ಈ ಗೊಂದಲಕ್ಕೆ ಕಾರಣವಾಯಿತು. ಕೆಲವರು ರೂಪಾಯಿ ಚಿಹ್ನೆ (₹) ಇರುವ ನಾಣ್ಯಗಳು ಅಸಲಿ ಎಂದು ಹೇಳಿದರೆ, ಇನ್ನು ಕೆಲವರು 10 ಸಂಖ್ಯೆ ಇರುವ ನಾಣ್ಯಗಳು ಮಾತ್ರ ಮಾನ್ಯವಾಗಿರುತ್ತವೆ ಎಂದು ಹೇಳುತ್ತಾರೆ

ಆರ್‌ಬಿಐ ಪ್ರಕಾರ, ಭಾರತ ಸರ್ಕಾರವು ಅನುಮೋದಿಸಿ ಆರ್‌ಬಿಐ ಬಿಡುಗಡೆ ಮಾಡಿದ ವಿವಿಧ ವಿನ್ಯಾಸಗಳ 10 ರೂಪಾಯಿ ನಾಣ್ಯಗಳು ಸಂಪೂರ್ಣವಾಗಿ ಕಾನೂನುಬದ್ಧವಾಗಿವೆ ಮತ್ತು ವಹಿವಾಟುಗಳನ್ನು ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ಗೊಂದಲವನ್ನು ನಿವಾರಿಸಲು ಆರ್‌ಬಿಐ ಈ ಹಿಂದೆ ಹಲವಾರು ಬಾರಿ ಜಾಗೃತಿ ಮೂಡಿಸಿದೆ. ಆರ್‌ಬಿಐ ವೆಬ್‌ಸೈಟ್‌ನಲ್ಲಿ ಸಹ ಇದರ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳಿವೆ. ಇದು 10 ರೂಪಾಯಿ ನಾಣ್ಯಗಳ 14 ವಿಭಿನ್ನ ವಿನ್ಯಾಸಗಳನ್ನು ವಿವರಿಸುತ್ತದೆ. ಇದಲ್ಲದೆ, ಆರ್‌ಬಿಐ ಒಂದು ಟೋಲ್-ಫ್ರೀ ಸಂಖ್ಯೆಯನ್ನು ಸಹ ಪ್ರಾರಂಭಿಸಿದೆ, ಇದರ ಮೂಲಕ ನೀವು 10 ರೂಪಾಯಿ ನಾಣ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದು.

10 ರೂಪಾಯಿ ನಾಣ್ಯದ ಬಗ್ಗೆ ಮಾಹಿತಿ ಪಡೆಯಲು ಆರ್‌ಬಿಐ 14440 ಎಂಬ ಟೋಲ್ ಫ್ರೀ ನಂಬರ್ ಅನ್ನು ಪ್ರಾರಂಭಿಸಿದೆ. ನೀವು ಈ ಸಂಖ್ಯೆಗೆ ಕರೆ ಮಾಡಿದರೆ, ಒಮ್ಮೆ ಕಾಲ್ ಕಟ್ ಆಗುತ್ತೆ. ಆದ್ರೆ ಅದೇ ನಂಬರ್‌ನಿಂದ ಮತ್ತೆ ನಿಮಗೆ ಸ್ವಯಂಚಾಲಿತವಾಗಿ ಮೆಸೇಜ್‌ ಬರುತ್ತದೆ, ಅಲ್ಲಿ 10 ರೂಪಾಯಿ ನಾಣ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು IVR ಮೂಲಕ ಒದಗಿಸಲಾಗುತ್ತದೆ.

ದೇಶಾದ್ಯಂತ ಚಲಾವಣೆಯಲ್ಲಿರುವ ಎಲ್ಲಾ 14 ವಿಧದ 10 ರೂಪಾಯಿ ನಾಣ್ಯಗಳು ಮಾನ್ಯವಾಗಿರುತ್ತವೆ ಮತ್ತು ಅವುಗಳನ್ನು ಸ್ವೀಕರಿಸಬೇಕು ಎಂದು ಆರ್‌ಬಿಐ ಸ್ಪಷ್ಟವಾಗಿ ಹೇಳಿದೆ. 10 ರೂಪಾಯಿ ನಾಣ್ಯವನ್ನು ಸ್ವೀಕರಿಸಲು ನಿರಾಕರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಯಾರಿಗಾದರೂ ಯಾವುದೇ ಸಂದೇಹಗಳಿದ್ದರೆ, ಅವರು ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿ ತಮ್ಮ ಅನುಮಾನಗಳನ್ನು ನಿವಾರಿಸಿಕೊಳ್ಳಬಹುದು.

ಈ ಗೊಂದಲವನ್ನು ನಿವಾರಿಸಲು, ಎಲ್ಲಾ ರೀತಿಯ ₹10 ನಾಣ್ಯಗಳು ಕಾನೂನುಬದ್ಧವಾಗಿವೆ ಮತ್ತು ಯಾರಾದರೂ ಈ ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಿದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು RBI ತನ್ನ ವೆಬ್‌ಸೈಟ್‌ನಲ್ಲಿ ಸ್ಪಷ್ಟವಾಗಿ ಹೇಳಿದೆ. ಈ ನಿಟ್ಟಿನಲ್ಲಿ ಸಹಾಯ ಮಾಡಲು, ಆರ್‌ಬಿಐ 14440 ನಲ್ಲಿ ಟೋಲ್-ಫ್ರೀ ಐವಿಆರ್‌ಎಸ್ ಸೇವೆಯನ್ನು ಸಹ ಪ್ರಾರಂಭಿಸಿದೆ, ಅಲ್ಲಿ ಕರೆ ಮಾಡುವ ಮೂಲಕ ಸ್ವಯಂಚಾಲಿತ ಸಂದೇಶದ ಮೂಲಕ ವಿವರವಾದ ಮಾಹಿತಿಯನ್ನು ಪಡೆಯಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow