Darshan Admitted in Hospital: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್‌ ಫೋಟೊ ವೈರಲ್‌!

ಡಿಸೆಂಬರ್ 2, 2024 - 10:33
 0  16
Darshan Admitted in Hospital: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್‌ ಫೋಟೊ ವೈರಲ್‌!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಜೈಲು ಸೇರಿದ್ದ ಸ್ಯಾಂಡಲ್ವುಡ್   ನಟ ದರ್ಶನ್ ಸದ್ಯ ಮೆಡಿಕಲ್ ಗ್ರೌಂಡ್ಸ್ ಮೇಲೆ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ನಟ ಸರ್ಜರಿಗಾಗಿ ಜೈಲಿನಿಂದ ಹೊರಗೆ ಬಂದು ಇಷ್ಟು ದಿನವಾದರೂ ನಟನಿಗೆ ಸರ್ಜರಿ ಮಾಡಿಲ್ಲ. ನಟನ ಬಿಪಿ ವೇರಿಯೇಷನ್ಸ್ ಇದ್ದ ಕಾರಣ ಸರ್ಜರಿ ಮುಂದೂಡತ್ತಲೇ ಬರಲಾಗಿತ್ತು. ಇನ್ನು ದರ್ಶನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್‌ ಆಗಿದೆ.

6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್‌ ಕಳೆದ 4 ವಾರಗಳಿಂದ ಬಿಜಿಎಸ್‌ ಆಸ್ಪತ್ರೆಯಲ್ಲಿ ಪಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಮತ್ತೊಂದೆಡೆ ರೆಗ್ಯೂಲರ್‌ ಬೇಲ್‌ಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದೆ. ಮಂಗಳವಾಗರ (ಡಿ.3) ವಿಚಾರಣೆ ಮುಂದುವರಿಯಲಿದೆ, ಈ ನಡುವೆ ದರ್ಶನ್‌ ಅವರು ಚಿಕಿತ್ಸೆ ಪಡೆಯುತ್ತಿರುವ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿದೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow