Yatnal vs BYV: ಶಾಸಕ ಯತ್ನಾಳ್ʼಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ ಹೈಕಮಾಂಡ್!

ಡಿಸೆಂಬರ್ 2, 2024 - 12:08
 0  25
Yatnal vs BYV: ಶಾಸಕ ಯತ್ನಾಳ್ʼಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ ಹೈಕಮಾಂಡ್!

ಬೆಂಗಳೂರು: ಬಿಜೆಪಿಯ ಬಣ ಬಡಿದಾಟ ಈಗ ಸಮಾವೇಶಗಳ ಶಕ್ತಿ ಪ್ರದರ್ಶನಕ್ಕೆ ಬಂದು ನಿಂತಿದೆ, ಎರಡೂ ಬಣಗಳು ದಾವಣಗೆರೆಯಲ್ಲಿಯೇ ಸಮಾವೇಶ ನಡೆಸಲು ನಿರ್ಧಾರ ಮಾಡಿವೆ. ದೆಹಲಿಗೆ ಹೊರಟಿರೋ ಯತ್ನಾಳ್ ಟೀಂ ಸದನ ಸಮಿತಿ ಭೇಟಿ ಮಾಡಿ ವರದಿ ಸಲ್ಲಿಸಲಿದೆ, ಈ ಮಧ್ಯೆ ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕ ಯತ್ನಾಳ್ ಗೆ ಕೇಂದ್ರದ ಶಿಸ್ತು ಸಮಿತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.

ಪಕ್ಷ ವಿರೋಧಿ ಹೇಳಿಕೆ ಹಾಗೂ ನಡೆಯನ್ನ ನೀವು ತೋರುತ್ತಿದ್ದೀರಿ. ವಿನಾಕಾರಣ ಸುಳ್ಳು ಆರೋಪಗಳನ್ನ ಪಕ್ಷದ ವಿರುದ್ಧವೇ ಮಾಡುತ್ತಿದ್ದೀರಿ. ಇದು ಪಕ್ಷದ ಚೌಕಟ್ಟನ್ನ ಹಾಗೂ ನಿಯಮವನ್ನ ಮೀರಿದೆ. ಹೀಗಾಗಿ ನಿಮ್ಮ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಬಾರದು ಎಂದು ನೋಟಿಸ್ ನಲ್ಲಿ ಉಲ್ಲೇಖ ಮಾಡಲಾಗಿದೆ.

ನೋಟಿಸ್ ಗೆ ತಕ್ಷಣವೇ ಉತ್ತರ ನೀಡಿ. ಇಲ್ಲದಿದ್ದರೆ ನಿಮಗೆ ಏನೂ ಹೇಳಲು ಉಳಿದಿಲ್ಲ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಶಿಸ್ತು ಸಮಿತಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ವಿಜಯೇಂದ್ರ ತಂಡ ವರಿಷ್ಠರನ್ನು ಭೇಟಿಯಾಗಿ ಬಂದ ಬೆನ್ನಲ್ಲೇ ಯತ್ನಾಳ್ ಬಣ ಕೂಡ ಹೈಕಮಾಂಡ್ ಭೇಟಿಗೆ ಸಮಯ ಕೇಳಿದೆ ಎನ್ನಲಾಗುತ್ತಿದೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow