ಉಪೇಂದ್ರ ಅಭಿನಯದ “UI” ಸಿನಿಮಾ ವಾರ್ನರ್ ರಿಲೀಸ್! ಉಪ್ಪಿ ಎಂಟ್ರಿ ಹೇಗಿದೆ ಗೊತ್ತಾ..?

ಉಪೇಂದ್ರ ನಿರ್ದೇಶಿಸಿ ನಟಿಸಿದ ಸಿನಿಮಾ ಯುಐ ಡಿಸೆಂಬರ್ 20 ರಂದು ಬಿಡುಗಡೆಯಾಗಲು ಮುಹೂರ್ತ ನಿಗದಿಯಾಗಿದೆ. ಇದು ಟೀಸರ್ ಅಲ್ಲ, ಟ್ರೈಲರ್ ಅಲ್ಲ ಇದು ವಾರ್ನರ್ ಅನ್ನೋ ಮೂಲಕ ಮತ್ತೊಂದು ಹುಳ ಬಿಟ್ಟಿದ್ದಾರೆ ಉಪ್ಪಿ. ಇದೀಗ ಬೆಳ್ಳಿಗ್ಗೆ 11.07 ನಿಮಿಷಕ್ಕೆ ಈ ವಾರ್ನರ್ ರಿಲೀಸ್ ಆಗಿದೆ.
ವಾರ್ನರ್ ಅಂದ್ರೆ ಏನು ಅನ್ನೋದು ರಿವೀಲ್ ಆಗಿದೆ. ಉಪ್ಪಿಯ ಅಸಲಿ ಕ್ಯಾರೆಕ್ಟರ್ ಏನು ಅನ್ನೋದು ಈಗ ಗೊತ್ತಾಗಿದೆ. ಇಡೀ ಜಗ್ಗತ್ತೇ ಸರ್ವನಾಶ ಆದ ಕ್ಷಣದಲ್ಲಿ ಈ ವಾರ್ನರ್ ಬರ್ತಾನೇ ಅನ್ನೋದು ತಿಳಿಯುತ್ತದೆ. ಇಡೀ ದೇಶದ ಜನ ಒಂದೇ ಒಂದು ಲಂಗೋಟಿ ಮೇಲೆ ಇದ್ದಾರೆ. ಆದರೆ, ಇವರಿಗೆ ಜಾತಿ ಮೇಲೆ ಪ್ರೀತಿ ಇದೆ. ಮೊಬೈಲ್ ಮೇಲೆ ಇನ್ನಿಲ್ಲದ ಸೆಳೆತ ಇದೆ.
ಉಪ್ಪಿ UI ಸಿನಿಮಾದಲ್ಲಿ ಬೇರೆ ಬೇರೆ ವಿಚಾರಗಳನ್ನ ಹೇಳುತ್ತಿದ್ದಾರೆ. ಈ ಚಿತ್ರದಲ್ಲೂ ಜಾತಿ ಜಾತಿ ಅನ್ನೋರಿಗೆ ಟಾಂಗ್ ಕೊಟ್ಟಂತೆ ಇದೆ. ಧಿಕ್ಕಾರ ಕೂಗೋ ಜನರ ವಿರುದ್ಧ ಹೇಗೆ ರೊಚ್ಚಿಗೇಳಬೇಕು ಅನ್ನೋದನ್ನ ತಿಳಿಸಿದ್ದಾರೆ ಅನಿಸುತ್ತದೆ. ಗುಂಡಿನ ಸುರಿ ಮಳೆ ಗೈಯೋ ಗನ್ ಹಿಡಿದು ಹೋರಾಟಗಾರರನ್ನ ಸುಟ್ಟು ಬಿಡೋ ದೃಶ್ಯವೂ ಈ ಚಿತ್ರದಲ್ಲಿದೆ.
ಒಂದು ಬಾಳೆ ಹಣ್ಣಿಗಾಗಿ ಕಿತ್ತಾಟ ನಡೆಯುತ್ತದೆ. ‘ನಂಗೆ ಬಾಳೆ ಹಣ್ಣು’ ಎಂದು ಸಾಕಷ್ಟು ಜನ ಕಿತ್ತಾಟ ನಡೆಸುತ್ತಾ ಇರುತ್ತಾರೆ. ಸುತ್ತಲೂ ನೋಡಿದರೆ ಇಡೀ ಜಗತ್ತು ನಾಶ ಆಗುವ ಹಂತಕ್ಕೆ ಬಂದಿರುತ್ತದೆ. ಜಾತಿ ವಿಚಾರ ಎಂಬುದು ಯಾವ ಹಂತಕ್ಕೆ ಹೋಗಿರುತ್ತದೆ ಎಂಬುದನ್ನು ತೋರಿಸಲಾಗಿದೆ. ‘ಜಾತಿ ಮುದ್ರೆ ಕಡ್ಡಾಯ’ ಎಂಬುದು ವಾರ್ತೆಯಲ್ಲಿ ಬರುತ್ತಿರುತ್ತದೆ.
ಹೀಗಿರುವಾಗಲೇ ಉಪೇಂದ್ರ ಅವರ ಎಂಟ್ರಿ ಆಗುತ್ತದೆ. ದೊಡ್ಡದಾದ ಕಾರ್ನಲ್ಲಿ ಉಪೇಂದ್ರ ಆಗಮಿಸುತ್ತಾರೆ. ಆದರೆ, ಉಪೇಂದ್ರ ವಿರುದ್ಧ ಅನೇಕರು ಘೋಷಣೆ ಕೂಗುತ್ತಾರೆ. ಅವರ ಮೇಲೆ ಗುಂಡಿನ ದಾಳಿ ನಡೆಸೋ ಉಪೇಂದ್ರ, ‘ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ’ ಎನ್ನುತ್ತಾರೆ. ಒಟ್ಟಿನಲ್ಲಿ ಡಿಸೆಂಬರ್ 20 ರಂದು ಉಪ್ಪಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಯುಐ ರಿಲೀಸ್ ಆಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






