Darshan-Pavithra Gowda: ಜೈಲಿನಲ್ಲಿರೋ ದರ್ಶನ್ ಎಕ್ಸ್ಕ್ಲೂಸಿವ್ ಫೋಟೋ ವೈರಲ್!

ಆಗಸ್ಟ್ 16, 2025 - 18:05
 0  23
Darshan-Pavithra Gowda: ಜೈಲಿನಲ್ಲಿರೋ ದರ್ಶನ್ ಎಕ್ಸ್ಕ್ಲೂಸಿವ್ ಫೋಟೋ ವೈರಲ್!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಮತ್ತೆ ಜೈಲು ಸೇರಿದ್ದಾರೆ. ಈ ವೇಳೆ, ಜೈಲಿನೊಳಗೆ ಹೋಗುವ ಮುನ್ನ ಇವರಿಬ್ಬರ ತಪಾಸಣೆ ವೇಳೆ ತೆಗೆದ ಫೋಟೋಗಳು ಈಗ ವೈರಲ್‌ ಆಗಿವೆ. ಫೋಟೋದಲ್ಲಿ ದರ್ಶನ್ ಬೋಳು ತಲೆಯೊಂದಿಗೆ, ಬಿಳಿ ಗಡ್ಡ ಹಾಗೂ ಸುಕ್ಕುಗಟ್ಟಿದ ಮುಖದಲ್ಲಿ ಕಾಣಿಸಿಕೊಂಡಿದ್ದಾರೆ.

ಇದುವರೆಗೆ ವಿಗ್ ಧರಿಸುತ್ತಿದ್ದ ದರ್ಶನ್, ಪೊಲೀಸ್ ಠಾಣೆಯಲ್ಲಿ ತೆಗೆದು ಫೋಟೋದಲ್ಲಿ ತಲೆಯಲ್ಲಿ ಕೂದಲು ಇಲ್ಲದಿರುವುದನ್ನು ಕಾಣಬಹುದಾಗಿದೆ. ಸದ್ಯ ಲಭ್ಯವಿರುವ ದರ್ಶನ್ ಹಾಗೂ ಪವಿತ್ರಾ ಗೌಡ ಫೋಟೋಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ತೆಗೆದಿರುವುದಾಗಿದೆ.

ಅಂದಹಾಗೆ, ಜಾಮೀನು ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠವು ಈ ಆದೇಶವನ್ನು ಪ್ರಕಟಿಸಿತು. ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ, ‘ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಲಾಗಿದೆ ಮತ್ತು ಆರೋಪಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಲಾಗಿದೆ’ ಎಂದು ನ್ಯಾಯಾಲಯ ಆದೇಶಿಸಿತು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow