ದರ್ಶನ್ ಇಲ್ಲದೇ ಸ್ಟಾರ್ ನಟಿಯಿಂದ ‘ಡೆವಿಲ್’ ಪ್ರಚಾರ..!? ಬಿಡುಗಡೆ ಆಗುತ್ತ “ದಾಸ”ನ ಸಿನಿಮಾ?
ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಮಾಡಿದ್ದು, ದರ್ಶನ್ ಹಾಗೂ ಇತರೆ ಆರೋಪಿಗಳು ಕನಿಷ್ಠ ಆರು ತಿಂಗಳ ಕಾಲ ಜೈಲಿನಲ್ಲಿಯೇ ಇರಬೇಕಾಗಿದೆ. ಆರು ತಿಂಗಳ ಬಳಿಕವೂ ಬಿಡುಗಡೆ ಖಚಿತವಲ್ಲ.
ಇದೇ ವೇಳೆ, ದರ್ಶನ್ ಈಗಾಗಲೇ ಅಭಿನಯಿಸಿರುವ ‘ಡೆವಿಲ್’ ಸಿನಿಮಾ ಬಿಡುಗಡೆಯ ಸಿದ್ಧತೆಯಲ್ಲಿದೆ. ದರ್ಶನ್ ಮೊದಲೇ ಜೈಲಿನಲ್ಲಿದ್ದಾಗ ಬಿಡುಗಡೆಯಾದ ‘ಸಾರಥಿ’ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಇದೀಗ ‘ಡೆವಿಲ್’ ಚಿತ್ರವೂ ಇದೇ ಸ್ಥಿತಿಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಅಕ್ಟೋಬರ್ 31ರಂದು ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ದರ್ಶನ್ ಜೈಲಿನಲ್ಲಿ ಇರುವುದರಿಂದ ಚಿತ್ರದ ಪ್ರಚಾರ ಕಾರ್ಯವನ್ನು ಅವರ ಆಪ್ತ ಧನ್ವೀರ್ ಗೌಡ ಹಾಗೂ ನಟಿ ರಚಿತಾ ರಾಮ್ ಮುನ್ನಡೆಸಲಿದ್ದಾರೆ. ರಾಜ್ಯದಾದ್ಯಂತ ಪ್ರವಾಸ ಮಾಡಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವ ನಿರೀಕ್ಷೆಯಿದೆ. ಇಬ್ಬರೂ ಸಹ ದರ್ಶನ್ ಅವರಿಗೆ ಬಲು ಆಪ್ತರಾಗಿದ್ದು, ಇಬ್ಬರೂ ಸಹ ದರ್ಶನ್ ಪರವಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿ ‘ಡೆವಿಲ್’ ಸಿನಿಮಾದ ಪ್ರಚಾರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ಗೆ ಆಪ್ತರಾಗಿರುವ ಇನ್ನೂ ಕೆಲವರು ಪ್ರಚಾರ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?