ಇಂದು ಕಿಚ್ಚನ ಕೊನೆಯ ಪಂಚಾಯಿತಿ: ಶೋ ಆರಂಭಕ್ಕೂ ಮೊದಲೇ ಒಬ್ಬರ ಔಟ್‌‌ ಆಗ್ತಾರಂತೆ?

ಜನವರಿ 18, 2025 - 20:02
 0  9
ಇಂದು ಕಿಚ್ಚನ ಕೊನೆಯ ಪಂಚಾಯಿತಿ: ಶೋ ಆರಂಭಕ್ಕೂ ಮೊದಲೇ ಒಬ್ಬರ ಔಟ್‌‌ ಆಗ್ತಾರಂತೆ?

ಬಿಗ್ ಬಾಸ್ ಸೀಸನ್ 11 ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಗ್ರ್ಯಾಂಡ್‌ ಫಿನಾಲೆಗೆ ಹೀಗಾಗಲೇ ಭರ್ಜರಿ ಸಿದ್ಧತೆ ಕೂಡ ನಡೆಯುತ್ತಿದೆ. ಒಂದೆಡೆ ಬಿಗ್ ಬಾಸ್ ಸೀಸನ್ 11 ರ ಇಂದು ತುಂಬಾ ಸ್ಪೆಷಲ್ ಡೇ. ಇನ್ನೂ ಮುಂದೆ ಬಿಗ್ ಬಾಸ್ ಯಾವುದೇ ಸೀಸನ್ ಸುದೀಪ್ ನಡೆಸುವುದಿಲ್ಲ ಎಂದು ತಿಳಿದು ಬಂದಿದೆ. 

ಹೀಗಾಗಿ ಇಂದು ಮತ್ತು ನಾಳೆ ಕಿಚ್ಚನ ಕೊನೆ ಪಂಚಾಯಿತಿ ಆಗಲಿದೆ. ಇಂದು ಹಾಗೂ ನಾಳೆ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬರುವುದು ಗ್ಯಾರಂಟಿಯಾಗಿದೆ. ವಾರದ ಮಧ್ಯದ ಎಲಿಮಿನೇಷನ್‌ ರದ್ದು ಮಾಡಿದ ಬಿಗ್ ಬಾಸ್‌ ವಾರಾಂತ್ಯಕ್ಕೆ ಡಬ್ಬಲ್‌ ಎಲಿಮಿನೇಷನ್‌ ಎನ್ನುವ ಶಾಕ್ ನೀಡಿದ್ದಾರೆ. 

ಅದು ಅಲ್ಲದೇ ಈ ವಾರ ಪಂಚಾಯ್ತಿಗೂ ಮೊದಲೇ ಒಬ್ಬರು ಎಲಿಮಿನೇಟ್‌ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಟಿಕೆಟ್‌ ಟು ಫಿನಾಲೆ ಪಡೆದ ಹನುಮಂತ ಹಾಗೂ ತ್ರಿವಿಕ್ರಮ್‌ ಹಾಗೂ ತಮ್ಮ ವ್ಯಕ್ತಿತ್ವದಿಂದಲೇ ಈವರೆಗೂ ಪ್ರೇಕ್ಷಕರ ಮನಸ್ಸು ಗೆದ್ದಿರುವ ಪಾರು ಖ್ಯಾತಿಯ ನಟಿ ಮೋಕ್ಷಿತಾ ಪೈ ಫಿನಾಲೆ ವಾರ ತಲುಪಿದ್ದಾರೆ. 

ಟಿಕೆಟ್‌ ಟು ಫಿನಾಲೆ ಪಡೆದ ಹನುಮಂತ ಹಾಗೂ ಭವ್ಯ ಗೌಡ ನಾಮಿನೇಟ್‌ ಮಾಡಿದ ತ್ರಿವಿಕ್ರಮ್‌ ಹೊರತು ಪಡಿಸಿ ಉಳಿದ ಎಲ್ಲಾ ಸ್ಪರ್ಧಿಗಳು ನಾಮಿನೇಟ್‌ ಆದರು. ವಿಶೇಷ ಅಧಿಕಾರ ಪಡೆದುಕೊಂಡ ಹನುಮಂತ ಧನರಾಜ್‌ ಅವರ ಹೆಸರನ್ನು ತೆಗೆದುಕೊಂಡು ಸೇಫ್‌ ಮಾಡಬಹುದು ಎಂದು ವೀಕ್ಷಕರು ಊಹಿಸಿದ್ದರು. ಹನುಮಂತ ಯಾರೂ ಊಹಿಸಿರದ ಮೋಕ್ಷಿತಾ ಅವರನ್ನು ಉಳಿಸಿ ಫಿನಾಲೆ ವಾರಕ್ಕೆ ಹೋಗಲು ಅವಕಾಶ ಮಾಡಿಕೊಡುತ್ತಾರೆ. ಇನ್ನು ನಿನ್ನೆ ಮನೆಗೆ ವಾಪಾಸ್ ಬಂದ ಸ್ಪರ್ಧಿಗಳು ತಮ್ಮ ಸಹಿ ಮತ್ತು ಕಹಿ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ಈ ಮೂಲಕ ತಮ್ಮ ಆ ನೆನಪುಗಳನ್ನ ತಾಜಾ ಮಾಡಿಕೊಂಡಿದ್ದಾರೆ.

ಉಗ್ರಂ ಮಂಜು ಎತ್ತಿ ಬಿಸಾಕಿರೋದನ್ನ ಶಿಶಿರ್ ಹೇಳಿಕೊಂಡಿದ್ದಾರೆ. ಉಪ್ಪಿನ ಕಾಯಿ ತಿಂದು ನಾಮಿನೇಟ್ ಆಗಿರೋದನ್ನ ಗೋಲ್ಡ್ ಸುರೇಶ್ ಹೇಳಿಕೊಂಡಿದ್ದಾರೆ.ಅನುಷ್ಕಾ ರೈ ಇಲ್ಲಿ ಭವ್ಯ ಗೌಡಗೆ ಬುದ್ಧಿ ಹೇಳುವ ಕೆಲಸ ಮಾಡಿದ್ದಾರೆ. ಮಾನಸ ನೀವು ಇಬ್ಬರು ಹೀಂಗ್ಯಾಕೆ ಅಂತ ತ್ರಿವಿಕ್ರಮ್ ಮತ್ತು ಭವ್ಯ ಉದ್ದೇಶಿಸಿಯೇ ಮಾತ್ ಆಡಿದ್ದಾರೆ.

ಒಟ್ಟಾರೆ, ಮನೆಯಲ್ಲಿ ಒಂದು ಹೊಸ ಖುಷಿ ಕ್ರಿಯೇಟ್ ಆಗಿದೆ. ಆದರೆ, ಈ ಸಲ ಯಾರು ಗೆಲ್ತಾರೆ ಅನ್ನೋ ಲೆಕ್ಕಾಚಾರ ಎಲ್ಲರ ಮನದಲ್ಲೂ ಇದೆ. ಬಿಗ್ ಬಾಸ್ ಸ್ಪರ್ಧಿಗಳು ವಾಪಾಸ್ ಬಂದಿದ್ದಾರೆ. 

ಬಿಗ್ ಬಾಸ್ ಕನ್ನಡ ಸೀಸನ್ 11 ಇಂದು ಹಾಗೂ ನಾಳೆ ವೀಕೆಂಡ್‌ ಸಂಚಿಕೆಗಳನ್ನು ಹೊರತುಪಡಿಸಿದರೆ ಕೇವಲ ಒಂದು ವಾರ ಪ್ರಸಾರಗೊಳ್ಳಲಿದೆ. ಈಗಾಗಲೇ ಗ್ರ್ಯಾಂಡ್‌ ಫಿನಾಲೆ ದಿನಾಂಕ ಕೂಡ ನಿಗದಿಯಾಗಿತ್ತು.

ಇನ್ನೂ ಬಿಗ್‌ ಬಾಸ್‌ ಮನೆಯಲ್ಲಿ  ಗೆಲ್ಲೋರು ಯಾರು? ಸೋಲೋರು ಯಾರು ಅನ್ನೋ ಲೆಕ್ಕಾಚಾರವೂ ಶುರು ಆಗಿದೆ. ಕಟ್ಟ ಕಡೆಯ ನಾಮಿನೇಷನ್ ಪ್ರಕ್ರಿಯೆ ಕೂಡ ಇದೇ ವಾರ ಎಂಡ್ ಅಗಿದೆ. ಇನ್ನೂ ಒಂದು ವಾರ ಆದ್ರೆ ಮುಗಿತು. ಎಲ್ಲವೂ ಎಂಡ್ ಆಗುತ್ತದೆ. ಇನ್ನು ಇಂದು ಹಾಗೂ ನಾಳೆ ಕೊನೆಯೆ ವಾರದ ಕಿಚ್ಚನ ಪಂಚಾಯಿತಿ. ಹೀಗಾಗಿ ತುಂಬಾ ಇಂಟ್ರಂಸ್ಟಿಂಗ್‌  ಆಗಿ ಬಿಗ್‌ ಬಾಸ್‌ ಮೂಡಿ ಬರಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow