Darshan: ರಾಜಕೀಯಕ್ಕೆ ಎಂಟ್ರಿ ಕೊಟ್ರಾ ನಟ ದರ್ಶನ್..!?‌ ಮುಖ್ಯಮಂತ್ರಿಯಾದ “ದಾಸ”..! ಪೋಸ್ಟರ್ ವೈರಲ್

ಎಪ್ರಿಲ್ 19, 2025 - 15:59
 0  17
Darshan: ರಾಜಕೀಯಕ್ಕೆ ಎಂಟ್ರಿ ಕೊಟ್ರಾ ನಟ ದರ್ಶನ್..!?‌ ಮುಖ್ಯಮಂತ್ರಿಯಾದ “ದಾಸ”..! ಪೋಸ್ಟರ್ ವೈರಲ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಚಿತ್ರೀಕರಣ ಬರದಿಂದ ಸಾಗುತ್ತಿದ್ದು, ಕಳೆದ ವಾರವಷ್ಟೇ ರಾಜಸ್ಥಾನಕ್ಕೆ ತೆರಳಿದ ಚಿತ್ರತಂಡವು ಮತ್ತೆ ಬೆಂಗಳೂರಿಗೆ ಮರಳಿ ಇದೀಗ ಸದ್ದಿಲ್ಲದೆ ಬೆಂಗಳೂರು ನಗರದಲ್ಲಿಯೇ ಚಿತ್ರಿಕರಣವನ್ನು ಮುಂದುವರಿಸುತ್ತಿದೆ. ಹೌದು, ಬಹುನಿರೀಕ್ಷಿತ ಡೆವಿಲ್ ಸಿನಿಮಾ ಚಿತ್ರೀಕರಣ ಬರದಿಂದ ಸಾಗುತ್ತಿದ್ದು 4ನೇ ಹಂತದ ಚಿತ್ರೀಕರಣಕ್ಕೆಂದು ಬೆಂಗಳೂರು ನಗರದಲ್ಲಿ ಚಿತ್ರೀಕರಣ ನಡೆಸುತ್ತಿದೆ.‌

ಇದೀಗ ಸಿನಿಮಾ ಚಿತ್ರೀಕರಣದ ಕೆಲ ಚಿತ್ರಗಳು ಲೀಕ್ ಆಗಿವೆ. ಲೀಕ್ ಆದ ಚಿತ್ರವೊಂದರಲ್ಲಿ ದರ್ಶನ್ ಫೋಟೊ ಕಟೌಟ್ ಹಾಕಿದ್ದು ಅದರಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಧನುಶ್ ರಾಜಶೇಖರ್ ಎಂದು ಬರೆದಿದೆ. ಕಟೌಟ್​ನಲ್ಲಿ ದರ್ಶನ್ ಕೈಮುಗಿಯುತ್ತಿರುವ ಚಿತ್ರವಿದೆ. ಅದೇ ಕಟೌಟ್​ನಲ್ಲಿ ಕರುನಾಡ ಪ್ರಜಾ ಪಕ್ಷ ಎಂಬ ಹೆಸರಿದೆ. ಡೆವಿಲ್’ ಸಿನಿಮಾ ಡಾನ್ ಒಬ್ಬನ ಕತೆಯನ್ನು ಒಳಗೊಂಡಿದೆ ಎಂದು ಟೀಸರ್ ನೋಡಿದವರು ಅಂದುಕೊಂಡಿದ್ದರು.

ಆದರೆ ಈಗ ಲೀಕ್ ಆಗಿರುವ ಫೋಟೊ ನೋಡಿದರೆ ಸಿನಿಮಾದಲ್ಲಿ ರಾಜಕೀಯದ ಕತೆಯೂ ಇದ್ದಂತಿದೆ. ಪ್ರಕಾಶ್‌ ವೀರ್‌ ನಿರ್ದೇಶನದಲ್ಲಿ ಡೆವಿಲ್‌ ಸಿನಿಮಾ ತಯಾರಾಗುತ್ತಿದೆ. ದರ್ಶನ್‌ ಗೆ ಜೋಡಿಯಾಗಿ ಯುವ ನಟಿ ರಚನಾ ರೈ ಅಭಿನಯಿಸುತ್ತಿದ್ದಾರೆ. ಈ ವರ್ಷವೇ ಡೆವಿಲ್‌ ಸಿನಿಮಾ ತೆರೆಗೆ ಬರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow