Dharmasthala Case: FSL ವರದಿ ಬರುವವರೆಗೂ ಧರ್ಮಸ್ಥಳದಲ್ಲಿ ಶವ ಶೋಧಕ್ಕೆ ಬ್ರೇಕ್: ಡಾ.ಜಿ ಪರಮೇಶ್ವರ್
ಬೆಂಗಳೂರು: ಅಧಿವೇಶನ ಆರಂಭವಾದ ದಿನದಿಂದಲೇ ಧರ್ಮಸ್ಥಳ ಪ್ರಕರಣವೇ ಚರ್ಚೆಯ ವಿಷಯವಾಗಿದೆ. ಬಿಜೆಪಿ ನಿರಂತರವಾಗಿ ಸರ್ಕಾರದಿಂದ ತನಿಖಾ ವರದಿ ನೀಡಬೇಕೆಂದು ಒತ್ತಾಯಿಸುತ್ತಿದೆ. ಇದೀಗ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಎಸ್ಐಟಿ ಸರ್ಕಾರಕ್ಕೆ ಇನ್ನೂ ಮಧ್ಯಂತರ ವರದಿ ಸಲ್ಲಿಸಿಲ್ಲ.
ಎಫ್ಎಸ್ಎಲ್ ವರದಿ ಬರುವವರೆಗೂ ಅಸ್ಥಿಪಂಜರ ಶೋಧ ತಾತ್ಕಾಲಿಕವಾಗಿ ಸ್ಥಗಿತವಾಗಿದೆ ಎಂದಿದ್ದಾರೆ. ಪ್ರಣವ್ ಮೋಹಾಂತಿ ನೇತೃತ್ವದ ಎಸ್ಐಟಿ ತಂಡ ತನಿಖೆ ನಡೆಸುತ್ತಿದ್ದು, ಧರ್ಮಸ್ಥಳದ ಸುತ್ತಮುತ್ತ ಅನಾಮಿಕ ವ್ಯಕ್ತಿ ಗುರುತಿಸಿದ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ.
ಆದರೆ, ಗುರುತಿಸಲಾದ ಸ್ಥಳಗಳಲ್ಲಿ ಕೇವಲ ಎರಡು ಕಡೆ ಮಾತ್ರ ಮಾನವ ಅಸ್ಥಿಪಂಜರದ ಸುಳಿವು ದೊರೆತಿದೆ. ಈಗಾಗಲೇ ಪತ್ತೆಯಾದ ಅವಶೇಷಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ತನಿಖೆ ಮುಂದುವರಿಯಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಹಲವು ಹೇಳಿಕೆಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಪರಮೇಶ್ವರ್, ಇನ್ನು ಎಷ್ಟು ಕಡೆ ಅಗೆಯುತ್ತೀರಿ ಎಂದು ಕೇಳ್ತಾ ಇದ್ದಾರೆ. ಅವರನು ಪೂರ್ತಿ ಧರ್ಮಸ್ಥಳ ತೋರಿಸಿದರೆ ಅಗೆಯಲು ಸಾಧ್ಯವಿಲ್ಲ, ಮುಂದೆ ಅಗೆಯಬೇಕೊ ಬೇಡವೊ ತಿರ್ಮಾನ ಎಸ್ಐಟಿ ಮಾಡುತ್ತದೆ. ನಾವು ಹೇಳೋದಿಲ್ಲ, ಏನು ಮಾಡಬೇಕು ಎಂದು ಎಸ್ಐಟಿ ಮಾಡುತ್ತದೆ ಎಂದು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?