ಸುಳ್ಳು ವರದಕ್ಷಿಣೆ ಕೇಸ್ ಹಾಕಿದ ಮಹಿಳೆಗೆ 1.8 ಕೋಟಿ ದಂಡ! ಕಾನೂನು ಹೋರಾಟದಿಂದ ಮುಕ್ತಿ ಪಡೆದ ಪತಿರಾಯ
ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಸುಳ್ಳು ವರದಕ್ಷಿಣೆ ಪ್ರಕರಣಗಳು ಹೆಚ್ಚಾಗುತ್ತಿದೆ. ಕೆಲವೊಂದಿಷ್ಟು ಮಹಿಳೆಯರು ಕಾನೂನನ್ನು ದುರುಪಯೋಗಡಿಸಿಕೊಂಡು ಪತಿ ಮತ್ತು ಕುಟುಂಬಸ್ಥರ ವಿರುದ್ಧ ಸುಳ್ಳು ವರದಕ್ಷಿಣೆ ಮತ್ತು ಕಿರುಕುಳದ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.
ಅದೇ ರೀತಿ ಇಲ್ಲೊಂದು ಪ್ರಕರಣ ನಡೆದಿದ್ದು, ಉತ್ತರ ಪ್ರದೇಶದ ಗುರುಗ್ರಾಮದಲ್ಲಿ ಮಹತ್ವದ ತೀರ್ಪು ಹೊರಬಂದಿದೆ. ಇಂಗ್ಲೆಂಡ್ ಮೂಲದ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿ ವಿರುದ್ಧ ಸಲ್ಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿ, ಸುಳ್ಳು ವರದಕ್ಷಿಣೆ ಕೇಸ್ ದಾಖಲಿಸಿದ್ದಕ್ಕೆ ಕೋರ್ಟ್ ಮಹಿಳೆಗೆ 1.8 ಕೋಟಿ ರೂಪಾಯಿ ದಂಡ ವಿಧಿಸಿದೆ.
ಈ ಪ್ರಕರಣವು ಸುಮಾರು 16 ವರ್ಷಗಳ ಕಾಲ ಕಾನೂನು ಹೋರಾಟಕ್ಕೆ ಕಾರಣವಾಗಿತ್ತು. ಸುಳ್ಳು ಕೇಸಿನ ಪರಿಣಾಮವಾಗಿ ಮಾನಸಿಕ ಹಿಂಸೆ ಹಾಗೂ ಆರ್ಥಿಕ ನಷ್ಟ ಅನುಭವಿಸಿದ್ದೇನೆ ಎಂದು ಪತಿ ಸಾಕ್ಷಿ ಸಹಿತ ಕೋರ್ಟ್‌ನಲ್ಲಿ ವಾದಿಸಿದ್ದರು. ಕೊನೆಗೂ ಪತಿಯ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ, ಮಹಿಳೆಗೆ ಭಾರೀ ದಂಡ ವಿಧಿಸಿದೆ. ಮಹಿಳಾ ಪರ ಕಾನೂನುಗಳನ್ನು ದುರುಪಯೋಗ ಮಾಡಬಾರದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ನಿಮ್ಮ ಪ್ರತಿಕ್ರಿಯೆ ಏನು?