DK Shivakumar: ನಿಯಮಗಳಿಗೆ ಅನುಸಾರ, ಎಚ್ಚರಿಕೆಯಿಂದ ಹೊಸವರ್ಷದ ಆಚರಣೆ ಮಾಡಿ: ಡಿಕೆ ಶಿವಕುಮಾರ್

ಬೆಂಗಳೂರು: ನಿಯಮಗಳಿಗೆ ಅನುಸಾರ, ಎಚ್ಚರಿಕೆಯಿಂದ ಹೊಸವರ್ಷದ ಆಚರಣೆ ಮಾಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹೋಟೆಲ್, ರೆಸಾರ್ಟ್ನವರು ಸರ್ಕಾರದ ನಿಯಮಗಳಿಗೆ ಅನುಸಾರ ಹೊಸ ವರ್ಷದ ಆಚರಣೆ ಮಾಡಿ.
ನಾವು ಬ್ಯುಸಿನೆಸ್ ಮಾಡುವವರಿಗೂ ಅಡ್ಡಿ ಪಡಿಸಲು ಆಗಲ್ಲ. ಬೆಂಗಳೂರಿನಾದ್ಯಂತ 10,000 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದನ್ನು ಎಚ್ಚರಿಕೆ ಅಂತನಾದ್ರೂ ತಿಳಿದುಕೊಳ್ಳಿ, ಮನವಿ ಅಂತನಾದ್ರೂ ತಿಳಿದುಕೊಳ್ಳಿ ಆದ್ರೆ ನಿಯಮಗಳಿಗೆ ಅನುಸಾರ, ಎಚ್ಚರಿಕೆಯಿಂದ ಹೊಸವರ್ಷದ ಆಚರಣೆ ಮಾಡಿ ಅಂತ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






