Ee Sala Cup Namdu: ಪಂಜಾಬ್ ವಿರುದ್ಧ RCBಗೆ ಗೆಲವು: ವಿಜಯ್ ಮಲ್ಯ ಹೇಳಿದ್ದೇನು ಗೊತ್ತಾ..?

ಆರ್ಸಿಬಿ ತಂಡವು ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ಮಣಿಸಿ ಚೊಚ್ಚಲ ಐಪಿಎಲ್ ಕಪ್ ಗೆದ್ದಿದೆ. ಈ ಗೆಲುವಿಗೆ ಮಾಜಿ ಮಾಲೀಕ ವಿಜಯ್ ಮಲ್ಯ ಫುಲ್ ಖುಷಿಯಾಗಿದ್ದು,
ತಂಡವನ್ನು ಅಭಿನಂದಿಸಿದ್ದಾರೆ. ಸೋಶಿಯಲ್ ಮೀಡಿಯಾ ವೇದಿಕೆ X ನಲ್ಲಿ ಮಲ್ಯ ಬರೆದುಕೊಂಡಿದ್ದಾರೆ. 18 ವರ್ಷಗಳ ನಂತರ RCB ಅಂತಿಮವಾಗಿ IPL ಚಾಂಪಿಯನ್ ಆಗಿದೆ. ಐಪಿಎಲ್ ಶುರುವಾದಗಿಂದ ಇಲ್ಲಿಯವರೆಗೆ ಆರ್ಸಿಬಿ ಉತ್ತಮ ಅಭಿಯಾನ ಮಾಡಿದೆ.
ಟ್ರೋಫಿ ಗೆದ್ದ ನಿಮಗೆ ಅನಂತ ಅಭಿನಂದನೆಗಳು! ಈ ಸಲ ಕಪ್ ನಮ್ದೇ!! ಎಂದು ಮಲ್ಯ ಬರೆದುಕೊಂಡಿದ್ದಾರೆ. 18 ವರ್ಷಗಳ ಸತತ ಕನಸು.. ‘ಈ ಸಲ ಕಪ್ ನಮ್ದೇ’ ಎಂಬ ಘೋಷಣೆ.. ಆರ್ಸಿಬಿ ಮ್ಯಾನೇಜ್ಮೆಂಟ್ ಪರಿಶ್ರಮ, ಆಟಗಾರರ ನಿರಂತರ ಪ್ರಯತ್ನ,
ಅಭಿಮಾನಿಗಳ ಪ್ರಾರ್ಥನೆ, ಹಾರೈಕೆ ಕೊನೆಗೂ ಫಲಿಸಿದೆ. ಸತತ ವರ್ಷಗಳ ಕಾಯುವಿಕೆಯ ನಂತರ ಆರ್ಸಿಬಿ ಟ್ರೋಫಿಗೆ ಮುತ್ತಿಟ್ಟಿದೆ. ಕೋಟ್ಯಾಂತರ ಅಭಿಮಾನಿಗಳ ಕನಸು ನನಸಾಗಿದೆ. ಆರ್ಸಿಬಿ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ. ಗೆಲುವು ಸಾಧಿಸುತ್ತಿದ್ದಂತೆಯೇ ಆರ್ಸಿಬಿ ಆಟಗಾರರು ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






