Gadag: 19ರ ಯುವತಿ ಹಿಂದೆ ಬಿದ್ದ 47ರ ಅಂಕಲ್! ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

ಮಾರ್ಚ್ 21, 2025 - 17:59
 0  29
Gadag: 19ರ ಯುವತಿ ಹಿಂದೆ ಬಿದ್ದ 47ರ ಅಂಕಲ್! ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

ಗದಗ: ಪ್ರೀತಿಗೆ ವಯಸ್ಸಿಲ್ಲ ಅಂತಾರೆ ಆದ್ರೆ ಇಲ್ಲೊಬ್ಬ 49 ವರ್ಷದ ವ್ಯಕ್ತಿ ತನ್ನ ಮಿತಿಮೀರಿದ ವಯಸ್ಸಿನಲ್ಲಿ ಮಾಡಬಾರದ ಕೆಲಸವನ್ನು ಮಾಡಿದ್ದಾನೆ. ಹೌದು ಆಂಕಲ್‌ ಕೊಟ್ಟ ಕಿರುಕುಳಕ್ಕೆ  ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದ ಬೆಟಗೇರಿ ಸಮಾಜ ಕಲ್ಯಾಣ ಇಲಾಖೆ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ಹಾಸ್ಟೆಲ್ ನಲ್ಲಿ ನಡೆದಿದೆ.

ಕಿರಣ ಕಳೆದ ಹಲವು ದಿನಗಳಿಂದ ವಂದನಾಗೆ ನಿತ್ಯ ಫೋನ್ ‌ಮಾಡೋದು, ಮೆಸೇಜ್ ಮಾಡಿ, ಮದುವೆ ಆಗುವಂತೆ ಕಿರುಕುಳ ನೀಡುತ್ತಿದ್ದನಂತೆ. ಮದುವೆ ಆಗದಿದ್ದರೆ ಇಬ್ಬರ ಫೋಟೋ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ಆತನ ಕಿರುಕುಳ ತಾಳಲಾರದೆ ವಂದನಾ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

47 ವರ್ಷದ ಕಿರಣ್​​​ಗೆ ಎರಡು ಕಾಲು ಇಲ್ಲ. ಆದರೂ ತನ್ನ ವಯಸ್ಸು ಆ ಯುವತಿ ವಯಸ್ಸು ಏನು ಎನ್ನುವುದನ್ನು ಯೋಚಿಸಿದೇ ಪ್ರೀತ್ಸೆ ಪ್ರೀತ್ಸೆ ಎಂದು ದುಂಬಾಲು ಬಿದ್ದಿದ್ದಾನೆ. ಕಿರಣ್​ನ ಕಿರುಕುಳ ತಾಳಲಾರದೇ ವಂದನಾ ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಇದಕ್ಕೆ ಕಾರಣನಾದ ಕಿರಣ್​ನಿಗೆ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಬೆಟಗೇರಿ ಪೊಲೀಸ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಕಿರಣ್​​ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow