Heart Attack: 3ನೇ ತರಗತಿ ವಿದ್ಯಾರ್ಥಿನಿಗೆ ಹಾರ್ಟ್ ಅಟ್ಯಾಕ್! ಟೀಚರ್‌‌ ಕಣ್ಣೆದುರೇ ಬಾಲಕಿ ಸಾವು

ಜನವರಿ 6, 2025 - 16:17
 0  33
Heart Attack: 3ನೇ ತರಗತಿ ವಿದ್ಯಾರ್ಥಿನಿಗೆ ಹಾರ್ಟ್ ಅಟ್ಯಾಕ್! ಟೀಚರ್‌‌ ಕಣ್ಣೆದುರೇ ಬಾಲಕಿ ಸಾವು

ಚಾಮರಾಜನಗರ: ಹೃದಯಾಘಾತ ಎನ್ನುವುದು ಬರೀ ವಯಸ್ಸಾದವರನ್ನು ಮಾತ್ರವಲ್ಲ, ಯುವಕರನ್ನು, ಮಕ್ಕಳನ್ನೂ ಕಾಡುತ್ತದೆ ಎನ್ನುವುದಕ್ಕೆ ಚಾಮರಾಜನಗರದಲ್ಲಿ ನಡೆದ ಘಟನೆಯೊಂದು ಕಾರಣವಾಗಿದೆ. ಹೌದು 3ನೇ ತರಗತಿಯ ವಿದ್ಯಾರ್ಥಿನಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಸೆಂಟ್ ಪ್ರಾನ್ಸಿಸ್ ಶಾಲೆಯಲ್ಲಿ ನಡೆದಿದೆ.

ಚಾಮರಾಜನಗರದ ಸೆಂಟ್‌ ಫ್ರಾನ್ಸಿಸ್‌ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ಶಿಕ್ಷಕರಿಗೆ ನೋಟ್ಸ್‌ ತೋರಿಸಲೆಂದು ತೆರಳುತ್ತಿದ್ದಳು. ಈ ವೇಳೆ ತೇಜಸ್ವಿನಿ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಇನ್ನು ಟೀಚರ್‌ ಕಣ್ಣೆದುರೇ ಬಾಲಕಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾಳೆ. ತಕ್ಷಣ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಶಿಕ್ಷಕರು ಕರೆತಂದಿದ್ದು, ದುರಾದೃಷ್ಟವಶಾತ್‌ ಆಸ್ಪತ್ರೆಗೆ ತರುವಷ್ಟರಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.

ಸೈಲೆಂಟ್ ಕಿಲ್ಲರ್ ಎಂದೇ ಹೆಸರಾಗಿರುವ ಹೃದಯಾಘಾತ, ಹಿಂದೆಯೆಲ್ಲಾ 50 ವರ್ಷ ಮೇಲ್ಪಟ್ಟವರನ್ನು ಮಾತ್ರ ಹೆಚ್ಚಾಗಿ ಕಾಡುತ್ತಿತ್ತು. ಆದರೀಗ ಈ ಹೃದಯಾಘಾತ ಎಲ್ಲ ವಯೋಮಾನದವರನ್ನೂ ಕಾಡಲು ಶುರು ಮಾಡಿದೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow