IND vs AUS: ಟೀಮ್ ಇಂಡಿಯಾ ಪರ ಕಣಕ್ಕಿಳಿದ ಬೆನ್ನಲ್ಲೇ ದಾಖಲೆ ಬರೆದ ರೋಹಿತ್ ಶರ್ಮಾ!

ಅಕ್ಟೋಬರ್ 19, 2025 - 12:10
 0  20
IND vs AUS: ಟೀಮ್ ಇಂಡಿಯಾ ಪರ ಕಣಕ್ಕಿಳಿದ ಬೆನ್ನಲ್ಲೇ ದಾಖಲೆ ಬರೆದ ರೋಹಿತ್ ಶರ್ಮಾ!

ಪರ್ತ್: ಟೀಮ್ ಇಂಡಿಯಾ ಪರ 500 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಐವರು ಪ್ರಮುಖ ಆಟಗಾರರಲ್ಲಿ ಐದನೇ ಸ್ಥಾನಕ್ಕೆ ರೋಹಿತ್ ಶರ್ಮಾ ಸೇರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ರೋಹಿತ್ ಶರ್ಮಾ (Rohit Sharma) ಈ ವಿಶಿಷ್ಟ ದಾಖಲೆ ಬರೆದಿದ್ದಾರೆ.

ಭಾರತದ ಪರ 500 ಪಂದ್ಯಗಳನ್ನಾಡಿದ ಮೊದಲ ನಾಲ್ಕು ಆಟಗಾರರು ಸಚಿನ್ ತೆಂಡೂಲ್ಕರ್ (664), ವಿರಾಟ್ ಕೊಹ್ಲಿ (551), ಮಹೇಂದ್ರ ಸಿಂಗ್ ಧೋನಿ (535) ಮತ್ತು ರಾಹುಲ್ ದ್ರಾವಿಡ್ (504). ಇದೀಗ ರೋಹಿತ್ ಶರ್ಮಾ ಐದನೇ ಭಾರತೀಯನಾಗಿ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ರೋಹಿತ್ ಶರ್ಮಾ ಭಾರತದ ಪರ 500 ಪಂದ್ಯಗಳಲ್ಲಿ 532 ಇನಿಂಗ್ಸ್ ಆಡಿದ್ದು, ಇವರೆಗೆ 19701 ರನ್, 49 ಶತಕ, 108 ಅರ್ಧಶತಕ ಮತ್ತು 637 ಸಿಕ್ಸರ್ ಸಿಡಿಸಿರುವ ಸಾಧನೆ ಮಾಡಿದ್ದಾರೆ.

ಮೂರು ಪಂದ್ಯಗಳ ಆಸ್ಟ್ರೇಲಿಯಾ ಸರಣಿಯಲ್ಲಿ ರೋಹಿತ್ 300 ರನ್ ತಲುಪಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರ ರನ್ ಪೂರೈಸುವ ದಾಖಲೆ ಸಿಕ್ಕಲಿದೆ. ಹಾಗೆಯೇ ಸರಣಿಯಲ್ಲಿ ಒಂದು ಶತಕ ಸಿಡಿಸಿದರೆ 50 ಅಂತಾರಾಷ್ಟ್ರೀಯ ಶತಕಗಳ ಸಾಧಕರ ಪಟ್ಟಿಯಲ್ಲಿ ಹೆಸರು ಬರಲಿದೆ. ಹೀಗಾಗಿ ಹಿಟ್ಮ್ಯಾನ್ ರೋಹಿತ್ ಶರ್ಮಾ ಆಸೀಸ್ ಪಿಚ್‌ನಲ್ಲಿ ಭರ್ಜರಿ ದಾಖಲೆಗಳನ್ನು ನಿರೀಕ್ಷಿಸಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow