IPL ಮೆಗಾ ಹರಾಜಿಗೆ ಸ್ಟಾರ್ ಪ್ಲೇಯರ್ಸ್: ಇಬ್ಬರಲ್ಲಿ ಯಾರನ್ನು ಖರೀದಿಸುತ್ತೆ RCB..?

ಅಕ್ಟೋಬರ್ 29, 2024 - 09:19
 0  13
IPL ಮೆಗಾ ಹರಾಜಿಗೆ ಸ್ಟಾರ್ ಪ್ಲೇಯರ್ಸ್: ಇಬ್ಬರಲ್ಲಿ ಯಾರನ್ನು ಖರೀದಿಸುತ್ತೆ RCB..?

IPL 2025 ರ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಅದರಂತೆ ಪ್ರಾಂಚೈಸಿಗಳು ಸ್ಟಾರ್ ಆಟಗಾರರ ಮೇಲೆ ಕಣ್ಣಾಗಿದೆ. ಕೆ.ಎಲ್.ರಾಹುಲ್, ರಿಷಭ್ ಪಂತ್ ಮೆಗಾ ಹರಾಜಿಗೆ ಬರೋದು ಫಿಕ್ಸ್​ ಆಗಿದೆ. ಇದೀಗ ಇವರಿಬ್ಬರ ಮೇಲೆ ಆರ್​ಸಿಬಿಯ ಕಣ್ಣು ಬಿದ್ದಿದೆ.

ಆರೇ ದಿನಗಳಲ್ಲಿ ಐಪಿಎಲ್ ತಂಡಗಳ ರಿಟೈನ್​ ಲಿಸ್ಟ್ ಹೊರ ಬೀಳಲಿದೆ. ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದ್ರ ನಡುವೆ ಎರಡು ಫ್ರಾಂಚೈಸಿಗಳು ತಮ್ಮ ನಾಯಕರಿಗೆ ಶಾಕ್​ ನೀಡಿವೆ.

ಐಪಿಎಲ್ ಟೂರ್ನಿ ಮಧ್ಯೆಯಿಂದಲೇ ಚರ್ಚೆಯ ಕೇಂದ್ರ ಬಿಂದುವಾಗಿದ್ದ ಹೆಸರು ಕೆ.ಎಲ್.ರಾಹುಲ್. ಲಕ್ನೋ ಮಾಲೀಕರ ಜೊತೆಗಿನ ವಾಗ್ವಾದದ ಬಳಿಕವೇ ರಾಹುಲ್, ಲಕ್ನೋ ಬಿಡ್ತಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಆ ಸುದ್ದಿ ಬಹುತೇಕ ನಿಜವಾದಂತಿದೆ. ಲಕ್ನೋ ಫ್ರಾಂಚೈಸಿ ಕೆ.ಎಲ್​ ರಾಹುಲ್​ಗೆ ಗೇಟ್​ಪಾಸ್​ ನೀಡಲು ನಿರ್ಧರಿಸಿದೆ.

ಮೆಂಟರ್ ಜಹೀರ್ ಖಾನ್, ಹೆಡ್ ಕೋಚ್ ಜಸ್ಟಿನ್ ಲ್ಯಾಂಗರ್ ಆ್ಯಂಡ್ ಟೀಮ್ ಮ್ಯಾನೇಜ್​ಮೆಂಟ್​ ಕಳೆದ ಸೀಸನ್​ನಲ್ಲಿ ತಂಡದ ಸೋಲಿನ ಪರಾಮರ್ಶೆ ನಡೆಸಿದ್ದಾರೆ. ಈ ವೇಳೆ ಲಕ್ನೋ ತಂಡದ ಸೋಲಿಗೆ ಪ್ರಮುಖ ಕಾರಣವೇ ಕೆ.ಎಲ್.ರಾಹುಲ್ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಕೆ.ಎಲ್.ರಾಹುಲ್ ಆಡಿದ ಲಾಂಗ್​ ಇನ್ನಿಂಗ್ಸ್​ಗಳಲ್ಲೇ ಲಕ್ನೋ ಬಹುಪಾಲು ಮುಖಭಂಗ ಅನುಭವಿಸಿದೆ. ಇದೇ ಕಾರಣಕ್ಕೆ ಕೆ.ಎಲ್.ರಾಹುಲ್​ನ ಬಿಟ್ಟು ಮುಂದೆ ಸಾಗಲು ಲಕ್ನೋ ನಿರ್ಧರಿಸಿದೆ.

ಕೆ.ಎಲ್.ರಾಹುಲ್ ಆ್ಯಂಡ್ ರಿಷಭ್ ಪಂತ್​ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಕನ್ಫರ್ಮ್ ಆಗಿದೆ. ಇದು ವಿಕೆಟ್ ಕೀಪರ್ ಆ್ಯಂಡ್ ಕ್ಯಾಪ್ಟನ್​ನ ಹುಡುಕಾಟದಲ್ಲಿರುವ ರಾಯಲ್​ ಚಾಲೆಂಜರ್ಸ್ ಪಾಲಿಗೆ ಗುಡ್​ನ್ಯೂಸ್ ಆಗಿದೆ. ಈ ಇಬ್ಬರಲ್ಲಿ ಒಬ್ಬರನ್ನ ಮೆಗಾ ಹರಾಜಿನಲ್ಲಿ ಖರೀದಿಸುವ ಹೆಬ್ಬಯಕೆ ಹೊಂದಿರುವ ಆರ್​ಸಿಬಿ, ಒಂದೇ ಕಲ್ಲಿಲ್ಲಿ 2 ಹಕ್ಕಿ ಹೊಡೆಯೋ ಪ್ಲಾನ್​ನಲ್ಲಿದೆ.

ಕೆ.ಎಲ್.ರಾಹುಲ್ ಹಾಗೂ ರಿಷಭ್ ಪಂತ್, ವಿಕೆಟ್ ಕೀಪರ್ ಆ್ಯಂಡ್ ಕ್ಯಾಪ್ಟನ್ ಮೆಟಿರಿಯಲ್ಸ್​.. ಅಷ್ಟೇ ಅಲ್ಲ. ಗೇಮ್ ಚೇಂಜರ್​​ ಪ್ಲೇಯರ್ಸ್​ ಅನ್ನೋದ್ರಲ್ಲಿ ಡೌಟೇ ಇಲ್ಲ. ಹೀಗಾಗಿ ಈ ಇಬ್ಬರಲ್ಲಿ ಯಾರೇ ಆರ್​ಸಿಬಿಗೆ ಬಂದ್ರೂ, ತಂಡದ ಚರೀಷ್ಮಾ ಬದಲಾಗುತ್ತೆ. ಹೀಗಾಗಿ ಮೆಗಾ ಹರಾಜಿನಲ್ಲಿ ಆರ್​ಸಿಬಿ, ಯಾರನ್ನು ಖರೀದಿಸುತ್ತೆ ಅನ್ನೋದು ಭಾರೀ ಕುತೂಹಲ ಹುಟ್ಟಿಹಾಕಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow