IPL 2024: ರಾಯುಡು ಪ್ರಕಾರ ಈ ನಾಲ್ಕು ತಂಡಗಳು ಪ್ಲೇ ಆಫ್ ಆಡಲಿದ್ಯಂತೆ!

ಮೇ 2, 2025 - 10:43
 0  15
IPL 2024: ರಾಯುಡು ಪ್ರಕಾರ ಈ ನಾಲ್ಕು ತಂಡಗಳು ಪ್ಲೇ ಆಫ್ ಆಡಲಿದ್ಯಂತೆ!

2025 ಸೀಸನ್ 18ರ ಐಪಿಎಲ್ ಮುಕ್ತಾಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಪ್ರತಿ ತಂಡಗಳು 10 ಪಂದ್ಯ ಆಡಿ ಪ್ಲೇ ಆಫ್ ಲೆಕ್ಕಾಚಾರ ಆಕುತ್ತಿವೆ.

ಇದೀಗ ಸಿಎಸ್​ಕೆ ತಂಡವನ್ನು ಹೊರತುಪಡಿಸಿ ಉಳಿದೆಲ್ಲಾ ತಂಡಗಳು ಪ್ಲೇಆಫ್ ರೇಸ್​ನಲ್ಲಿದೆ. ಹೀಗೆ ಪ್ಲೇಆಫ್ ರೇಸ್​ನಲ್ಲಿರುವ ತಂಡಗಳ ನಡುವೆ ಯಾವ ಟೀಮ್​ಗಳು ಮುಂದಿನ ಸುತ್ತಿಗೆ ಪ್ರವೇಶಿಸಲಿದೆ ಎಂದು ಸಿಎಸ್​ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಭವಿಷ್ಯ ನುಡಿದಿದ್ದಾರೆ

ಗುಜರಾತ್ ಟೈಟಾನ್ಸ್: ಅಂಬಾಟಿ ರಾಯುಡು ಅವರ ಪ್ರಕಾರ, ಈ ಬಾರಿ ಗುಜರಾತ್ ಟೈಟಾನ್ಸ್ ತಂಡವು ಪ್ಲೇಆಫ್​ಗೆ ಪ್ರವೇಶಿಸುವುದು ಖಚಿತ. ಆಡಿರುವ 9 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿರುವ ಶುಭ್​ಮನ್ ಗಿಲ್ ನೇತೃತ್ವದ ಜಿಟಿ ಪಡೆ ಮುಂದಿನ ಪಂದ್ಯಗಳ ಮೂಲಕ ಪ್ಲೇಆಫ್ ಹಂತಕ್ಕೇರಲಿದೆ ಎಂದು ರಾಯುಡು ಹೇಳಿದ್ದಾರೆ.

ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ ಮುಂದಾಳತ್ವದ ಪಂಜಾಬ್ ಕಿಂಗ್ಸ್ ತಂಡ ಕೂಡ ಮುಂದಿನ ಹಂತಕ್ಕೇರಲಿದೆ.

ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಆರಂಭದಲ್ಲಿ ವಿಫಲರಾದರೂ, ಆ ಬಳಿಕ ಬ್ಯಾಕ್ ಟು ಬ್ಯಾಕ್ 5 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇದೀಗ 10 ಪಂದ್ಯಗಳಿಂದ 12 ಅಂಕ ಪಡೆದಿರುವ ಮಂಬೈ ಇಂಡಿಯನ್ಸ್ ಕೂಡ ಮುಂದಿನ ಪಂದ್ಯಗಳ ಮೂಲಕ ಪ್ಲೇಆಫ್ ಹಂತಕ್ಕೇರಲಿದೆ ಎಂದು ರಾಯುಡು ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್​ಸಿಬಿ ತಂಡವು ಈ ಬಾರಿಯ ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಈಗಾಗಲೇ 10 ಪಂದ್ಯಗಳಲ್ಲಿ 7 ಗೆಲುವು ದಾಖಲಿಸಿರುವ ರಾಯಲ್ ಪಡೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಈ ಬಾರಿಯ ಪ್ಲೇಆಫ್​ನಲ್ಲಿ ಆರ್​ಸಿಬಿ ತಂಡ ಕೂಡ ಕಾಣಿಸಿಕೊಳ್ಳುವುದು ಖಚಿತ ಎಂದಿದ್ದಾರೆ ಅಂಬಾಟಿ ರಾಯುಡು

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow