IPL 2025: ಆರೆಂಜ್ ಕ್ಯಾಪ್ ಗಾಗಿ ಬಿಗ್ ಫೈಟ್: ಮತ್ತೆ ಅಗ್ರಸ್ಥಾನಕ್ಕೇರಿದ ಕಿಂಗ್ ಕೊಹ್ಲಿ!

ಮೇ 6, 2025 - 09:01
 0  15
IPL 2025: ಆರೆಂಜ್ ಕ್ಯಾಪ್ ಗಾಗಿ ಬಿಗ್ ಫೈಟ್: ಮತ್ತೆ ಅಗ್ರಸ್ಥಾನಕ್ಕೇರಿದ ಕಿಂಗ್ ಕೊಹ್ಲಿ!

ಇಂಡಿಯನ್ ಪ್ರೀಮಿಯರ್ ಲೀಗ್ 2025 ಅಂತಿಮ ಘಟ್ಟಕ್ಕೆ ಬಂದಿದೆ. ಪ್ಲೇ ಆಫ್ ಸ್ಥಾನ ಕನ್ಫರ್ಮ್ ಮಾಡಿಕೊಳ್ಳಲು ತಂಡಗಳು ಇನ್ನಿಲ್ಲದ ಹೋರಾಟ ನಡೆಸ್ತಿವೆ. ಟಿ20 ಅನ್ನೋ ಬ್ಯಾಟರ್ಗಳ ಗೇಮ್ನಲ್ಲಿ ರನ್ ಹೊಳೆಯನ್ನೇ ಹರಿಸ್ತಿರುವ ಬ್ಯಾಟ್ಸ್ಮನ್, ಬೌಲರ್ಗಳ ಮೇಲೆ ಕರುಣೆ ತೋರದೇ ಹಿಗ್ಗಾಮುಗ್ಗಾ ಬಾರಿಸ್ತಿದ್ದಾರೆ. 

ಆರೆಂಜ್ ಕ್ಯಾಂಪ್ಗಾಗಿ ಸೀಸನ್-18ರ ಐಪಿಎಲ್ನಲ್ಲಿ ತೀವ್ರ ಪೈಪೋಟಿ ಶುರುವಾಗಿದೆ. ನಾನಾ ನೀನಾ ಅಂತಾ ಹೋರಾಡ್ತಿರುವ ಆಟಗಾರರು, ರನ್ಭೂಮಿಯಲ್ಲಿ ರನ್ ಹೊಳೆಯನ್ನೇ ಹರಿಸ್ತಿದ್ದಾರೆ. ಗರಿಷ್ಠ ರನ್ ಸ್ಕೋರರ್ಗೆ ನೀಡುವ ಈ ಆರೆಂಜ್ ಕ್ಯಾಪ್, ದಿನಕ್ಕೊಬ್ಬರ ಪಾಲಾಗ್ತಿದೆ. ಈ ಆರೆಂಜ್ ಕಿರೀಟಕ್ಕಾಗಿ 5 ಮಂದಿಯ ನಡುವೆ ಟಫ್ ಕಾಂಪಿಟೇಷನ್ ನಡೀತಿದೆ. ದಿನಕ್ಕೊಬ್ಬರ ಪಾಲಾಗ್ತಿದೆ ಆರೆಂಜ್ ಕ್ಯಾಪ್. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ಕಳೆದ 4 ದಿನಗಳಿಂದ ಮೂವರ ಪಾಲಾಗಿರುವುದು.

ಐಪಿಎಲ್ನಲ್ಲಿ ಸಾಲಿಡ್ ಪ್ರದರ್ಶನ ನೀಡ್ತಿರುವ ವಿರಾಟ್, ಚೆನ್ನೈ ಎದುರು ಅಬ್ಬರಿಸಿ ಬೊಬ್ಬೆರೆದರು. 33 ಎಸೆತಗಳಲ್ಲಿ 5 ಸಿಕ್ಸರ್, 5 ಬೌಂಡರಿ ಒಳಗೊಂಡ 62 ರನ್ ಗಳಿಸಿದ ಕೊಹ್ಲಿ, 505 ರನ್ ಕಲೆಹಾಕುವ ಮೂಲಕ ಸಾಯಿ ಸುದರ್ಶನ್ರನ್ನ ಹಿಂದಿಕ್ಕೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು.

ಪಾಯಿಂಟ್ಸ್ ಟೇಬಲ್ನಂತೆ ಆರೆಂಜ್ ಕ್ಯಾಪ್ ಕೂಡ ಹಾವು ಏಣಿ ಆಟ ವಾಡ್ತಿದೆ. ಆರೆಂಜ್ ಕ್ಯಾಂಪ್ಗಾಗಿ ಸೂರ್ಯಕುಮಾರ್ ಯಾದವ್ ಪೈಪೋಟಿಗಿಳಿದಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಅದ್ಬುತ ಪ್ರದರ್ಶನ ನೀಡ್ತಿರುವ ಸೂರ್ಯ, 11 ಪಂದ್ಯಗಳಿಂದ 475 ರನ್ ಗಳಿಸಿದ್ದಾರೆ. 172.72ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸ್ತಿರುವ ಸೂರ್ಯ ಟಾಪ್ ಸ್ಕೋರರ್ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.

ಸೂರ್ಯ ಮಾತ್ರವಲ್ಲ.. ರಾಜಸ್ಥಾನ್ ರಾಯಲ್ಸ್ ತಂಡದ ಜೈಸ್ವಾಲ್ ಕೂಡ ರೇಸ್ನಲ್ಲಿದ್ದಾರೆ. ಟೂರ್ನಿಯಲ್ಲಿ ಉಳಿದೆರಡು ಪಂದ್ಯಗಳನ್ನು ಮಾತ್ರವೇ ಆಡಲಿರುವ ಜೈಸ್ವಾಲ್, ಈ ರೇಸ್ನಲ್ಲಿ ಉಳಿಯೋದು ಅನುಮಾನವೇ ಆಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow