IPL 2025: ಕಪ್ ಗೆಲ್ಲಲು RCBಗೆ ಉತ್ತಮ ಸಲಹೆ ಕೊಟ್ಟ ಎಬಿಡಿ! ತಂಡ ಸೇರ್ತಾರಾ ಕಿಲ್ಲರ್ ಮಿಲ್ಲರ್!?

ನವೆಂಬರ್ 19, 2024 - 09:43
 0  9
IPL 2025: ಕಪ್ ಗೆಲ್ಲಲು RCBಗೆ ಉತ್ತಮ ಸಲಹೆ ಕೊಟ್ಟ ಎಬಿಡಿ! ತಂಡ ಸೇರ್ತಾರಾ ಕಿಲ್ಲರ್ ಮಿಲ್ಲರ್!?

IPL ಮೆಗಾ ಹರಾಜಿಗೆ ಕೆಲವೇ ದಿನಗಳು ಬಾಕಿ ಇದ್ದು, ಪ್ರಾಂಚೈಸಿಗಳು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ. ಇದೇ ವೇಳೆ RCBಗೆ ಎಬಿಡಿ ಮಹತ್ವದ ಸಲಹೆ ಕೊಟ್ಟಿದ್ದಾರೆ. 

ಪ್ರಸ್ತುತ ಆರ್​ಸಿಬಿ ತಂಡಕ್ಕೆ ಫಿನಿಶರ್ ಒಬ್ಬರ ಅಗತ್ಯವಿದೆ. ಹೀಗಾಗಿ 6ನೇ ಕ್ರಮಾಂಕಕ್ಕಾಗಿ ಸೌತ್ ಆಫ್ರಿಕಾದ ಸ್ಪೋಟಕ ದಾಂಡಿಗ ಡೇವಿಡ್ ಮಿಲ್ಲರ್ ಅವರನ್ನು ಖರೀದಿಸಬೇಕು. ಆರ್‌ಸಿಬಿ ಅವರನ್ನು ಹರಾಜಿನಲ್ಲಿ ಖರೀದಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಮಿಲ್ಲರ್ ಆಗಮನದಿಂದಾಗಿ ಆರ್​ಸಿಬಿ ತಂಡವು ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ.

ಡೇವಿಡ್ ಮಿಲ್ಲರ್ ಕಳೆದ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದರು. ಅಲ್ಲದೆ ಇದುವರೆಗೆ 130 ಪಂದ್ಯಗಳನ್ನಾಡಿರುವ ಅವರು 36.55 ರ ಸರಾಸರಿಯಲ್ಲಿ 2924 ರನ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧ ಶತಕ ಮತ್ತು 1 ಶತಕವನ್ನು ಗಳಿಸಿದ್ದಾರೆ. ಇನ್ನು 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೆಂಚುರಿ ಸಿಡಿಸಿದ್ದರು.

ಇದೀಗ ಮೆಗಾ ಹರಾಜಿನಲ್ಲಿರುವ ಕಿಲ್ಲರ್ ಮಿಲ್ಲರ್ ಖ್ಯಾತಿಯ ಸೌತ್ ಆಫ್ರಿಕಾ ಫಿನಿಶರ್ ಅನ್ನು ಆರ್​ಸಿಬಿ ತಂಡ ಖರೀದಿಸುವುದು ಉತ್ತಮ. ಈ ಮೂಲಕ ಬ್ಯಾಟಿಂಗ್ ಲೈನಪ್​ ಅನ್ನು ಮತ್ತಷ್ಟು ಬಲಿಷ್ಠಗೊಳಿಸಬಹುದು ಎಂದು ಎಬಿ ಡಿವಿಲಿಯರ್ಸ್ ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಆರ್​ಸಿಬಿ ಗಂಭೀರವಾಗಿ ಪರಿಗಣನಿಸಲಿದೆಯಾ ಎಂಬುದು ಈ ಬಾರಿಯ ಮೆಗಾ ಹರಾಜಿನಿಂದ ತಿಳಿದು ಬರಲಿದೆ.

ಇನ್ನು ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಫ್ರಾಂಚೈಸಿ ಒಟ್ಟು ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇಲ್ಲಿ ವಿರಾಟ್ ಕೊಹ್ಲಿಯನ್ನು 21 ಕೋಟಿ ರೂ. ನೀಡಿ ಉಳಿಸಿಕೊಂಡರೆ, ರಜತ್ ಪಾಟಿದಾರ್​ಗೆ 11 ಕೋಟಿ ರೂ. ನೀಡಲಾಗಿದೆ. ಹಾಗೆಯೇ ಯಶ್ ದಯಾಳ್ 5 ಕೋಟಿ ರೂ.ಗೆ ರಿಟೈನ್ ಆಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow