ದಿಢೀರ್ ಅರೆಸ್ಟ್ ಆದ ಮಲಯಾಳಂ ನಟ: ಬಿಗ್ಬಾಸ್ ಮಾಜಿ ಸ್ಪರ್ಧಿ ಮಾಡಿದ ತಪ್ಪೇನು!?

ಖ್ಯಾತ ಮಲಯಾಳಂ ನಟ ಪಿ.ಎಸ್.ಫರೀದುದ್ದೀನ್ರನ್ನ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.ನಿಷೇಧಿತ ಮಾದಕ ದ್ರವ್ಯ ಹೊಂದಿದ್ದ ಆರೋಪದ ಮೇಲೆ ದಾಳಿ ನಡೆದು ಅರೆಸ್ಟ್ ಮಾಡಲಾಗಿದೆ. ಕೇರಳದ ಪುಲ್ಲಿಕ್ಕಾನಂನಲ್ಲಿ ವಾಹನ ತಪಾಸಣೆ ವೇಳೆ ಪಿ.ಎಸ್.ಫರೀದುದ್ದೀನ್ MDMA ಮಾದಕ ದ್ರವ್ಯ ಮತ್ತು ಗಾಂಜಾದೊಂದಿಗೆ ಸಿಕ್ಕಿಬಿದ್ದಿದ್ದಾರೆ. ಫರೀದುದ್ದೀನ್ ಪ್ರಯಾಣಿಸುತ್ತಿದ್ದ ಕಾರಿನಲ್ಲಿ 10.50 ಗ್ರಾಂ MDMA ಮಾದಕ ದ್ರವ್ಯ ಮತ್ತು 9 ಗ್ರಾಂ ಗಾಂಜಾ ಪತ್ತೆಯಾಗಿದೆ.
ಹಿರಿಯ ಅಧಿಕಾರಿಗಳು ಮಾತನಾಡಿ, ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ 10.50 ಗ್ರಾಂ ಡ್ರಗ್ಸ್ ಪತ್ತೆಯಾಗಿದೆ. ವಾಹನದಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ಇಂಥ ಕೇಸ್ನಲ್ಲಿ 10 ರಿಂದ 20 ವರ್ಷ ಜೈಲು ಶಿಕ್ಷೆಗೆ ಅವಕಾಶ ಇದೆ ಎಂದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






