IPL 2025: ಐಪಿಎಲ್ ಟೂರ್ನಿ ಕ್ಯಾನ್ಸಲ್‌ ಆದ್ರೂ ಕೂಡ BCCIಗೆ ಯಾವುದೇ ನಷ್ಟವಿಲ್ಲ..! ಯಾಕೆ ಗೊತ್ತಾ..?

ಮೇ 10, 2025 - 10:40
 0  17
IPL 2025: ಐಪಿಎಲ್ ಟೂರ್ನಿ ಕ್ಯಾನ್ಸಲ್‌ ಆದ್ರೂ ಕೂಡ BCCIಗೆ ಯಾವುದೇ ನಷ್ಟವಿಲ್ಲ..! ಯಾಕೆ ಗೊತ್ತಾ..?

ವಿಶ್ವದ ಅತಿದೊಡ್ಡ ಟಿ20 ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) 18 ನೇ ಸೀಸನ್ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷ ಉಲ್ಬಣಗೊಂಡ ಕಾರಣ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪಂದ್ಯಾವಳಿಯನ್ನು ಒಂದು ವಾರಗಳವರೆಗೆ ಮುಂದೂಡಿದೆ. 74 ಪಂದ್ಯಗಳ ಟೂರ್ನಿಯಲ್ಲಿ ಈಗಾಗಲೇ 58 ಮ್ಯಾಚ್ಗಳು ಮುಗಿದಿದ್ದು, ಇನ್ನುಳಿದಿರುವುದು ಕೇವಲ 16 ಪಂದ್ಯಗಳು ಮಾತ್ರ. 16 ಪಂದ್ಯಗಳು ಒಂದು ವಾರಗಳ ಬಳಿಕ ಮತ್ತೆ ಆಯೋಜನೆಗೊಳ್ಳುವ ಸಾಧ್ಯತೆಯಿದೆ.

ಇನ್ನೂ  ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಒಂದು ವೇಳೆ ರದ್ದಾದರೆ ಬಿಸಿಸಿಐ ಮತ್ತು ತಂಡದ ಮಾಲೀಕರು ಎಷ್ಟು ನಷ್ಟ ಅನುಭವಿಸುತ್ತಾರೆ ಎಂಬುದು ಎಲ್ಲರ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ, ಐಪಿಎಲ್ ರದ್ದಾದರೆ ಬಿಸಿಸಿಐಗಾಗಲಿ ಅಥವಾ ಫ್ರಾಂಚೈಸಿಗಳಿಗಾಗಲಿ ಯಾವುದೇ ನಷ್ಟವಾಗುವುದಿಲ್ಲ ಎಂಬುದಾಗಿದೆ.

ಐಪಿಎಲ್ 2025 ಅನ್ನು ವಾರದವರೆಗೆ ಸ್ಥಗಿತಗೊಳಿಸಲಾಗಿದೆ. ವಾರದ ಬಳಿಕ ಪರಿಸ್ಥಿತಿ ತಿಳಿಯಾದರೆ ಈ ಸೀಸನ್ ಹೊಸ ವಿಂಡೋದಲ್ಲಿ ಪೂರ್ಣಗೊಳ್ಳುತ್ತದೆ. ಅಂದರೆ ಉಳಿದ ಪಂದ್ಯಗಳಿಗೆ ಬಿಸಿಸಿಐ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಆದಾಗ್ಯೂ ಮುಂದಿನ ವಾರವೂ ಪರಿಸ್ಥಿತಿ ಸುಧಾರಿಸದೆ ಪಂದ್ಯಾವಳಿಯನ್ನು ನಡೆಸಲು ಸಾಧ್ಯವಾಗದೆ ಐಪಿಎಲ್ ರದ್ದಾದರೂ ಯಾರಿಗೂ ಯಾವುದೇ ನಷ್ಟವಾಗುವುದಿಲ್ಲ. ಇದರ ಹಿಂದಿನ ಕಾರಣ ಬಿಸಿಸಿಐನ ವಿಮಾ ಪಾಲಿಸಿ.

ವಾಸ್ತವವಾಗಿ, ಇಂತಹ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡೆ ಬಿಸಿಸಿಐ, ಮುಂಚಿತವಾಗಿಯೇ ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ಹೇಗೆ ಜನರು ಅನಾರೋಗ್ಯದ ಚಿಕಿತ್ಸೆಗಾಗಿ, ಕಾರು ಮತ್ತು ಬೈಕಿಗೆ ಅಥವಾ ದುಬಾರಿ ಮೊಬೈಲ್ ಫೋನ್‌ಗೆ ವಿಮೆಯನ್ನು ತೆಗೆದುಕೊಳ್ಳುತ್ತಾರೋ ಅದೇ ರೀತಿ ಐಪಿಎಲ್ ಕೂಡ ವಿಮೆಯನ್ನು ಮಾಡಿಸಲಾಗಿದೆ. ಇದರೊಂದಿಗೆ, ತಂಡಗಳು ತಮ್ಮ ಆಟಗಾರರಿಗೆ ವಿಮೆಯನ್ನು ಸಹ ಮಾಡಿಸಿಕೊಳ್ಳುತ್ತವೆ. ಇದರಿಂದಾಗಿ ಆಟಗಾರರು ಗಾಯಗೊಂಡರೆ ಆ ಆಟಗಾರರ ಇಡೀ ಚಿಕಿತ್ಸೆ ವಿಮೆ ಮೂಲಕವೇ ನಡೆಯಲಿದೆ. ಇದರಿಂದ ಯಾವುದೇ ಫ್ರಾಂಚೈಸಿಗೂ ನಷ್ಟವಾಗುವುದಿಲ್ಲ.

ಇಷ್ಟು ಮಾತ್ರವಲ್ಲದೆ ಐಪಿಎಲ್‌ನ ಪ್ರತಿಯೊಂದು ಪಂದ್ಯ ಮತ್ತು ಆಟಗಾರನಿಗೆ ವಿಮೆ ಮಾಡಿಸಲಾಗಿರುತ್ತದೆ. ಇದರಿಂದ ಯಾವುದೇ ನಷ್ಟವನ್ನು ಸರಿದೂಗಿಸಬಹುದು. ಹೀಗಾಗಿ ಯಾವುದೇ ಫ್ರಾಂಚೈಸಿಗೂ ನಷ್ಟವುಂಟಾಗುವುದಿಲ್ಲ. ಅದೇ ಸಮಯದಲ್ಲಿ, ಪಂದ್ಯ ರದ್ದಾದರೆ, ಬಿಸಿಸಿಐ ಪ್ರಾಯೋಜಕರಿಂದ ಪಡೆಯುವ ಹಣಕ್ಕೆ ಪರಿಹಾರವನ್ನು ಸಹ ಪಡೆಯುತ್ತದೆ. ಯಾವುದೇ ಪಂದ್ಯ ರದ್ದಾದರೆ ಆಯಾ ತಂಡಗಳಿಗೆ ವಿಮಾ ಮೂಲಕ ನಷ್ಟದ ಮೊತ್ತವನ್ನು ನೀಡಲಾಗುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow