IPL 2025: ಮಾ. 17 ರಂದು RCB ಅನ್ಬಾಕ್ಸ್ ಇವೆಂಟ್!

IPL ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಇದ್ದು, ಅದಕ್ಕೂ ಮುನ್ನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 17 ರಂದು ಆರ್ಸಿಬಿ ತಂಡದ ಬಹು ನಿರೀಕ್ಷಿತ ಕಾರ್ಯಕ್ರಮ ಅನ್ಬಾಕ್ಸ್ ಇವೆಂಟ್ ನಡೆಯಲಿದೆ.
ಸಂಗೀತ ರಸಮಂಜರಿಯೊಂದಿಗೆ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಆರ್ಸಿಬಿ ತಂಡದ ನೂತನ ಜೆರ್ಸಿಯನ್ನು ಅನಾವರಣಗೊಳಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಆರ್ಸಿಬಿ ತಂಡದ ಆಟಗಾರರು ಕಾಣಿಸಿಕೊಳ್ಳಲಿದ್ದು, ಇವರೊಂದಿಗೆ ಕೆಲ ಮಾಜಿ ಆಟಗಾರರು ಸಹ ಉಪಸ್ಥಿತರಿರಲಿದ್ದಾರೆ. ಅದರಲ್ಲೂ ಈ ಬಾರಿ ಆರ್ಸಿಬಿ ಆಲ್ ಫೇಮ್ ಪ್ರಶಸ್ತಿ ಯಾರಿಗೆ ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
RCB ತನ್ನ ತಂಡದ ಪರ ಆಡಿದ ಮಾಜಿ ಆಟಗಾರರನ್ನು ಕಳೆದ ಎರಡು ವರ್ಷಗಳಿಂದ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಪ್ರಶಸ್ತಿಗೆ ಆರ್ಸಿಬಿ ಹಾಲ್ ಆಫ್ ಫೇಮ್ ಎಂಬ ಹೆಸರಿಡಲಾಗಿದೆ. ಈ ಗೌರವ ಪ್ರಶಸ್ತಿಯನ್ನು ಆರ್ಸಿಬಿ ಪರ ಆಡಿದ ಎಲ್ಲಾ ಆಟಗಾರರಿಗೆ ನೀಡಲಾಗುವುದಿಲ್ಲ. ಬದಲಾಗಿ ತಂಡದ ಪರ ಸರ್ವ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ಮಾತ್ರ ಸಲ್ಲುತ್ತದೆ. ಇದಕ್ಕಾಗಿ ಒಂದಷ್ಟು ಷರತ್ತುಗಳನ್ನು ಕೂಡ ಆರ್ಸಿಬಿ ರೂಪಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






