IPL 2026: ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ 11 ಕೋಟಿ ರೂ. ಆಟಗಾರನಿಗೆ ಗೇಟ್ ಪಾಸ್..!

ಅಕ್ಟೋಬರ್ 12, 2025 - 09:16
 0  16
IPL 2026: ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ 11 ಕೋಟಿ ರೂ. ಆಟಗಾರನಿಗೆ ಗೇಟ್ ಪಾಸ್..!

ಇಂಡಿಯನ್ ಪ್ರೀಮಿಯರ್ ಲೀಗ್ 2026 (IPL 2026) ಮಿನಿ ಹರಾಜು ಡಿಸೆಂಬರ್ ಮೂರನೇ ವಾರದಲ್ಲಿ ನಡೆಯಲಿದ್ದು, ಈ ಹರಾಜಿಗೂ ಮುನ್ನ ಕೆಲವು ಪ್ರಮುಖ ಆಟಗಾರರು ತಮ್ಮ ತಂಡಗಳಿಂದ ಹೊರಗುಳಿಯುತ್ತಿರುವ  ಸುದ್ದಿ ಹರಿದಾಡುತ್ತಿದೆ. ಈ ಪಟ್ಟಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಪ್ರಮುಖ ವೇಗಿ ಮಯಾಂಕ್ ಯಾದವ್ ಅವರ ಹೆಸರು ಕೂಡ ಸೇರಿದೆ ಎಂಬುದು ಗಮನಾರ್ಹ.

 23 ವರ್ಷದ ವೇಗದ ಬೌಲರ್ ಮಯಾಂಕ್ ಯಾದವ್, 2022ರಿಂದ ಲಕ್ನೋ ತಂಡದ ಭಾಗವಾಗಿದ್ದರು. 2024ರಲ್ಲಿ ಕೇವಲ ನಾಲ್ಕು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು, 7 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬೆನ್ನಲ್ಲೇ, 2025ರ ಮೆಗಾ ಹರಾಜು ಸಮಯದಲ್ಲಿ 11 ಕೋಟಿ ರೂ. ನೀಡುವ ಮೂಲಕ ಎಲ್‌ಎಸ್‌ಜಿ ರಿಟೇನ್ ಮಾಡಿಕೊಂಡಿತ್ತು. ಆದರೆ 2025ರ ಐಪಿಎಲ್ ಅವಧಿಯಲ್ಲಿ, ಮಯಾಂಕ್ ಫಿಟ್‌ನೆಸ್ ಸಮಸ್ಯೆಯಿಂದ ಕೇವಲ 2 ಪಂದ್ಯಗಳಿಗಷ್ಟೇ ಲಭ್ಯರಾಗಿದ್ದರು.

2 ಪಂದ್ಯಗಳಲ್ಲಿ ಅವರು 8 ಓವರ್ ಎಸೆದು 100 ರನ್ ನೀಡಿದರು ಮತ್ತು ಕೇವಲ 2 ವಿಕೆಟ್‌ಗಳಷ್ಟೇ ಪಡೆದರು. ಈ ನಿರೀಕ್ಷಿತ ಪ್ರದರ್ಶನದ ಕೊರತೆ ಮತ್ತು ಉತ್ತಮ ಫಿಟ್‌ನೆಸ್ ಲಭ್ಯವಿಲ್ಲದ ಹಿನ್ನೆಲೆಯಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಇದೀಗ ಮಯಾಂಕ್ ಯಾದವ್ ಅವರನ್ನು ಕೈ ಬಿಡುವ ನಿರ್ಧಾರಕ್ಕೆ ಬಂದಿರುವುದು ಮೂಲಗಳಿಂದ ತಿಳಿದುಬಂದಿದೆ. ಈ ಮೂಲಕ, ಫ್ರಾಂಚೈಸಿಯು ಮುಂದಿನ ಹರಾಜಿನಲ್ಲಿ ಹೊಸ ಆಟಗಾರರಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow