IPS ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ ಬುಕ್‌ ಅಕೌಂಟ್‌: ಆರೋಪಿ ಅರೆಸ್ಟ್‌

ನವೆಂಬರ್ 15, 2024 - 12:47
 0  17
IPS ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ ಬುಕ್‌ ಅಕೌಂಟ್‌: ಆರೋಪಿ ಅರೆಸ್ಟ್‌

 

ಬೆಳಗಾವಿ: ಸೈಬರ್ವಂಚಕರ ಹಾವಳಿ ಹೆಚ್ಚಾಗಿದೆ. ಫೇಸ್ಬುಕ್ಮತ್ತು ಇನ್​​ಸ್ಟಾಗ್ರಾಮ್​​ನಲ್ಲಿ ನಕಲಿ ಖಾತೆ ತರೆದು ವಂಚಿಸುತ್ತಿದ್ದಾರೆ. ನಕಲಿ ಖಾತೆಸೃಷ್ಟಿಸಿ ಹಣಕ್ಕೆ ಆಮಿಷ ಒಡ್ಡುತ್ತಾರೆ. ಅಲ್ಲದೇ, ಬ್ಲಾಕ್ಮೇಲ್ಮಾಡುವ ಮೂಲಕ ವಂಚಿಸುತ್ತಾರೆ. ಇದರ ಬೆನ್ನಲ್ಲೇ ಐಪಿಎಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ವಂಚನೆಗೆ ಯತ್ನಿಸುತ್ತಿದ್ದ ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಅರ್ಬಾಜ್ ಖಾನ್ ಬಂಧಿತ ಆರೋಪಿ. ಅರ್ಬಾಜ್ ಖಾನ್ ಬೆಳಗಾವಿ ಎಸ್ ಪಿ ಭೀಮಾಶಂಕರ್ ಗುಳೇದ್, ಗದಗ ಜಿಲ್ಲಾ ಎಸ್ ಪಿ ನೇಮಗೌಡ, ಮಂಡ್ಯ ಜಿಲ್ಲಾ ಎಸ್ ಪಿ ಮಲ್ಲಿಕಾರ್ಜುನ ಅವರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ, ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸುತ್ತಿದ್ದ.

ಬಳಿಕ ಹುಟ್ಟು ಹಬ್ಬ ಇದೆ ಎಂದು ಪೋಸ್ಟ್ ಹಾಕುತ್ತಿದ್ದ. ಶುಭಾಷಯ ತಿಳಿಸಿದವರನ್ನು ಟಾರ್ಗೆಟ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ಎಸ್ ಪಿ ಭೀಮಾಶಂಕರ್ ಗುಳೇದ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸದ್ಯ ಆರೋಪಿ ಅರ್ಬಾಜ್ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow