Plane Crash: ಭಾರೀ ಹೊಗೆಯೊಂದಿಗೆ ನೆಲಕ್ಕಪ್ಪಳಿಸಿದ ವಿಮಾನ: ಸಾವಿನ ಸಂಖ್ಯೆ 110ಕ್ಕೆ ಏರಿಕೆ!

ಜೂನ್ 12, 2025 - 16:01
 0  18
Plane Crash: ಭಾರೀ ಹೊಗೆಯೊಂದಿಗೆ ನೆಲಕ್ಕಪ್ಪಳಿಸಿದ ವಿಮಾನ: ಸಾವಿನ ಸಂಖ್ಯೆ 110ಕ್ಕೆ ಏರಿಕೆ!

ಅಹಮದಾಬಾದ್242 ಪ್ರಯಾಣಿಕರಿದ್ದ ವಿಮಾನವೊಂದು ಗುಜರಾತ್ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಮೇಘನಿನಗರ ಪ್ರದೇಶದಲ್ಲಿ ಪತನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾದ ವಿಮಾನವು ಏರ್ಇಂಡಿಯಾ ವಿಮಾನವಾಗಿದ್ದು, 242 ಪ್ರಯಾಣಿಕರನ್ನು ಹೊತ್ತು ಲಂಡನ್ ಕಡೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ​

ಇನ್ನೂ ಆರಂಭದಲ್ಲಿ 30 ಮಂದಿ ಸಾವು ಅನ್ನೋ ಮಾಹಿತಿ ಹೊರಬಿದ್ದಿತ್ತು. ಇದೀಗ ಸಾವಿನ ಸಂಖ್ಯೆ 110ಕ್ಕೆ ಏರಿಕೆಯಾಗಿದೆ. ಪೈಕಿ 132 ಮಂದಿ ಆಸ್ಪತ್ರೆ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಲಗಳ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

242 ಮಂದಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಜನನಿಬಿಡ ಪ್ರದೇಶದಲ್ಲೇ ಪತನಗೊಂಡಿದೆ. ಇದೀಗ ರಕ್ಷಾ ಕಾರ್ಯಗಳು ಮುಂದುವರಿದಿದೆ. 242 ಮಂದಿ ಪ್ರಯಾಣಿಕರ ಪೈಕಿ 169 ಭಾರತೀಯರಾಗಿದ್ದಾರೆ. ಇನ್ನು ಒಬ್ಬ ಕೆನಡಿಯನ್ ಪ್ರಜೆ, 7 ಪೋರ್ಚುಗೀಸ್ ಹಾಗೂ 53 ಬ್ರಿಟಿಷ್ ಪ್ರಜೆಗಳು ವಿಮಾನದಲ್ಲಿದ್ದರು.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow