Job Alert: ನಿರುದ್ಯೋಗಿಗಳೇ ಅಲರ್ಟ್: ಇಲ್ಲಿದೆ ಸರ್ಕಾರಿ ಹುದ್ದೆ! ಅರ್ಹರು ಅಪ್ಲೈ ಮಾಡಿ!

ಡಿಸೆಂಬರ್ 12, 2024 - 10:06
 0  8
Job Alert: ನಿರುದ್ಯೋಗಿಗಳೇ ಅಲರ್ಟ್: ಇಲ್ಲಿದೆ ಸರ್ಕಾರಿ ಹುದ್ದೆ! ಅರ್ಹರು ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. 

ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಕಿರಿಯ ಸಹಾಯಕರ ಹುದ್ದೆ, ಇತರೆ ಕೆಲವು ಕೆಲಸಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಈಗಾಗಲೇ ಅರ್ಜಿ ಆಹ್ವಾನಿಸಿ ಅಂತಿಮ ದಿನಾಂಕ ಕೂಡ ಮುಗಿದಿತ್ತು. ಆದರೆ ಇದೀಗ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿದ್ದರಿಂದ ಈಗ ಅರ್ಜಿಯನ್ನ ಮತ್ತೆ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 43 ವರ್ಷಗಳು

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು- 35 ರಿಂದ 38 ವರ್ಷ
ಹಿಂದುಳಿದ ವರ್ಗಗಳ ಅಭ್ಯರ್ಥಿಗಳು- 38 ರಿಂದ 41 ವರ್ಷ
ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳು- 40 ರಿಂದ 43 ವರ್ಷ

ಉದ್ಯೋಗದ ಹೆಸರು;

ಕಿರಿಯ ಸಹಾಯಕರು, ಇತರೆ ಉದ್ಯೋಗ

ಒಟ್ಟು ಹುದ್ದೆಗಳು; 07
ಇದರಲ್ಲಿ ಉಳಿಕೆ ಮೂಲ ವೃಂದಕ್ಕೆ 06, ಕಲ್ಯಾಣ ಕರ್ನಾಟಕಕ್ಕೆ 01 ಹುದ್ದೆ ಇದೆ.

ತಿಂಗಳ ಸಂಬಳ- 34,100 ರಿಂದ 67,600 ರೂಪಾಯಿಗಳು

ಮುಖ್ಯ ದಿನಾಂಕಗಳನ್ನ ನೆನಪಿಡಿ

ಅರ್ಜಿ ಸಲ್ಲಿಕೆಗೆ ಆರಂಭದ ದಿನಾಂಕ; 04 ಡಿಸೆಂಬರ್ 2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ; 03 ಜನವರಿ 2025
ಅರ್ಜಿ ಸಲ್ಲಿಸಬೇಕು ಎನ್ನುವರು ಈ ವೆಬ್‌ಸೈಟ್​ಗೆ ಭೇಟಿ ನೀಡಿ;
https://cetonline.karnataka.gov.in 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow