Kantara Chapter 1: ಒಂದೇ ವಾರದಲ್ಲಿ 500 ಕೋಟಿ ರೂ. ಗಳಿಕೆ! KGF ದಾಖಲೆ ಮುರಿದ ಕಾಂತಾರ-1 ಸಿನಿಮಾ

ಅಕ್ಟೋಬರ್ 10, 2025 - 20:01
 0  10
Kantara Chapter 1: ಒಂದೇ ವಾರದಲ್ಲಿ 500 ಕೋಟಿ ರೂ. ಗಳಿಕೆ! KGF ದಾಖಲೆ ಮುರಿದ ಕಾಂತಾರ-1 ಸಿನಿಮಾ

ರಿಷಭ್ ಶೆಟ್ಟಿ ಅವರ ಕಾಂತಾರ ಪ್ರೀಕ್ವೆಲ್ ಮೂವಿ ಥಿಯೇರ್​​ಗಳಲ್ಲಿ ಅಬ್ಬರಿಸುತ್ತಿದೆ. ಜನರನ್ನು ಸಿನಿಮಾ ಮಂದಿರಗಳತ್ತ ಸೆಳೆಯುತ್ತಿರುವ ಕಾಂತಾರ ಕಲೆಕ್ಷನ್​​ನಲ್ಲೂ ಹಿಂದೆ ಬಿದ್ದಿಲ್ಲ. ಹೌಸ್​ಫುಲ್​ ಶೋಗಳು ನಡೆಯುತ್ತಿರುವುದು ರಿಷಭ್​ ಶೆಟ್ಟಿ ಹಾಗೂ ನಿರ್ಮಾಪಕರಿಗೆ ಸಂತಸದ ಸುದ್ದಿಯಾಗಿದೆ. ಇದು ಹೀಗಿರುವಾಗಲೇ ಕಾಂತಾರ ಪ್ರೀಕ್ವೆಲ್​ ರಿಲೀಸ್ ಆಗಿ ಕೇವಲ ಒಂದು ವಾರಕ್ಕೆ ವರ್ಲ್ಡ್ವೈಡ್ 509.25 ಕೋಟಿ ಕಲೆಕ್ಷನ್ ಮಾಡಿದೆ.

ಕಾಂತಾರ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲಂಸ್ (Hombale Films) ಈಗ ಚಿತ್ರದ ಗಳಿಕೆ ಕುರಿತು ಅಧಿಕೃತ ಘೋಷಣೆ ಮಾಡಿದೆ. ಮೊದಲ ವಾರಕ್ಕೆ ಕಾಂತಾರ ಚಿತ್ರ ವರ್ಲ್ಡ್ವೈಡ್ 509.25 ಕೋಟಿ ಕಲೆಕ್ಷನ್ ಮಾಡಿದೆ. `ಕಾಂತಾರ’ ಚಿತ್ರ ತೆರೆಕಂಡ ಬಳಿಕ ಬರುತ್ತಿದ್ದ ಅದ್ಭುತ ರೆಸ್ಪಾನ್ಸ್ ಗಮನಿಸಿದಾಗ ಮೊದಲ ವಾರದೊಳಗೆ ಕಾಂತಾರ ಚಿತ್ರ 500 ಕೋಟಿ ಗಡಿ ದಾಟುವ ಸುಳಿವು ನೀಡಿತ್ತು. ಇದೀಗ ನಿರೀಕ್ಷಿಸಿದಂತೆ ಕಾಂತಾರ ಸರಿಸುಮಾರು 510 ಕೋಟಿ ರೂ. ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ.

ಅ.2 ರಂದು ಕಾಂತಾರ ಚಿತ್ರ ವಿಶ್ವದಾದ್ಯಂತ 7 ಭಾಷೆಗಳಲ್ಲಿ ತೆರೆಕಂಡಿತ್ತು. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಕಾಂತಾರಕ್ಕೆ ಅತ್ಯದ್ಭುತ ರೆಸ್ಪಾನ್ಸ್ ಸಿಗುತ್ತಿದ್ದು ವಿದೇಶದಲ್ಲೂ ಕಾಂತಾರ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಿಣಾಮ ಮೊದಲ ವಾರ 509 ಕೋಟಿ ಕಲೆಕ್ಷನ್ ಮಾಡಿದೆ.

ಕನ್ನಡದಲ್ಲಿ ಅತಿವೇಗದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಎರಡನೇ ಚಿತ್ರದ ಸ್ಥಾನದಲ್ಲಿದೆ ಕಾಂತಾರ. ಕೆಜಿಎಫ್ 2 ಚಿತ್ರ ಮೊದಲ ಸ್ಥಾನದಲ್ಲಿದೆ. ಕೆಜಿಎಫ್2 ಒಟ್ಟು 1215 ಕಲೆಕ್ಷನ್ ಮಾಡಿತ್ತು. ಇದೀಗ ಕಾಂತಾರ ಅದೇ ದಾರಿಯಲ್ಲಿದೆ. ಕಾಂತಾರ ಒಟಿಟಿ ಹಕ್ಕುಗಳನ್ನು ಅಮೇಜಾನ್ ಪ್ರೈಮ್‌ ಪಡೆದುಕೊಂಡಿದೆ. ಅಂದಾಜು ಸುಮಾರು 125 ಕೋಟಿ ರೂ. ಗಳಿಗೆ ಡಿಜಿಟಲ್ ಪ್ರಸಾರದ ಹಕ್ಕನ್ನು ಅಮೆಜಾನ್ ಪಡೆದುಕೊಂಡಿದೆ ಎಂದು ವರದಿಯಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow