Kidney Stones: ಕಿಡ್ನಿಯಲ್ಲಿ ಕಲ್ಲು ಇದ್ರೆ ಈ ಆಹಾರಗಳನ್ನು ಅಪ್ಪಿ ತಪ್ಪಿ ತಿನ್ನಲೇಬೇಡಿ..!

ಮೇ 26, 2025 - 07:00
 0  9
Kidney Stones: ಕಿಡ್ನಿಯಲ್ಲಿ ಕಲ್ಲು ಇದ್ರೆ ಈ ಆಹಾರಗಳನ್ನು ಅಪ್ಪಿ ತಪ್ಪಿ ತಿನ್ನಲೇಬೇಡಿ..!

ಇಂದು ನಮ್ಮ ಜೀವನಶೈಲಿಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳನ್ನು ಉಂಟುಮಾಡುತ್ತಿದೆ. ನಮ್ಮಆಹಾರ ಪದ್ಧತಿಯು ಬದಲಾಗಿದ್ದು ಇದರಿಂದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಸಮಸ್ಯೆಗಳಲ್ಲಿ ಮೂತ್ರಕೋಶದಲ್ಲಿ ಕಲ್ಲು (ಕಿಡ್ನಿ ಸ್ಟೋನ್) ಕಾಣಿಸಿಕೊಳ್ಳುವುದು ಒಂದಾಗಿದೆ.

ಮೂತ್ರದಲ್ಲಿ ಹೆಚ್ಚು ಲವಣಾಂಶಗಳು ಶೇಖರಣೆಯಾಗಿ ಘನರೂಪಕ್ಕೆ ಮಾರ್ಪಟ್ಟು ಮೂತ್ರಕೋಶದಲ್ಲಿ ಕಲ್ಲುಗಳು ಉಂಟಾಗುತ್ತವೆ. ಕಲ್ಲುಗಳು ಹರಳುಗಳ ರೂಪದಲ್ಲಿ ಅಥವಾ ಕಲ್ಲಿನಂತೆಯೇ ಕಾಣಿಸಿಕೊಳ್ಳಬಹುದು. ಕಲ್ಲುಗಳು ಮೂತ್ರನಾಳದಲ್ಲಿ ಸೇರಿಕೊಂಡು ಮೂತ್ರ ಹರಿವನ್ನು ತಡೆದಾಗ ನೋವು ಕಾಣಿಸಿಕೊಳ್ಳುತ್ತದೆ. ಹೆಂಗಸರಿಗಿಂತ ಗಂಡಸರಲ್ಲಿ ಸಮಸ್ಯೆಯು ಹೆಚ್ಚು

ಸಾಮಾನ್ಯವಾಗಿ ಕಿಡ್ನಿಯಲ್ಲಿ ಕಲ್ಲುಗಳು ಉಂಟಾದಾಗ ಹೆಚ್ಚು ನೋವಾಗುತ್ತದೆ, ಅದನ್ನು ವೈದ್ಯರ ಬಳಿ ಹೋಗಿ ತೆಗೆಸಿ ಬಿಡುವುದು ಉತ್ತಮ. ಆದರೆ ನೀವು ಆಹಾರದ ಬಗ್ಗೆ ಎಚ್ಚರವಹಿಸಬೇಕು.

ಮಾಂಸ ಹೆಚ್ಚಿನ ಜನರು ಮಾಂಸ ಮತ್ತು ಮೀನುಗಳನ್ನು ಇಷ್ಟಪಡುತ್ತಾರೆ. ಆದರೆ ನಿಮ್ಮ ಆರೋಗ್ಯವನ್ನು ನೋಡಿಕೊಂಡು ನೀವು ಅದನ್ನು ತಿನ್ನಬಾರದು. ಇದರಲ್ಲಿ ಪ್ಯೂರಿನ್ ಎಂಬ ಅಂಶವನ್ನು ಒಳಗೊಂಡಿರುವ ಕಾರಣ ಪ್ರೋಟೀನ್ ಅಧಿಕವಾಗಿರುವ ಆಹಾರಗಳನ್ನು ತಪ್ಪಿಸುವುದು ಮುಖ್ಯ. ರೋಗಿಯ ದೇಹದಲ್ಲಿ ಪ್ಯೂರಿನ್ ಪ್ರಮಾಣ ಹೆಚ್ಚಾದರೆ, ಆಗ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾಗುತ್ತದೆ, ಇದು ಕಲ್ಲಿನ ಗಾತ್ರವನ್ನೂ ಹೆಚ್ಚಿಸುತ್ತದೆ.

ಪಾಲಕ್ ನಿಮ್ಮ ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಲಪಾಲಕ್ ಸೇವನೆ ಮಾಡಬೇಡಿ, ಇದರಲ್ಲಿ ಆಕ್ಸಲೇಟ್ ಅನ್ನು ಹೊಂದಿರುತ್ತದೆ. ಪಾಲಕ್ ತಿನ್ನುವುದರಿಂದ ಕ್ಯಾಲ್ಸಿಯಂ ಸಂಗ್ರಹವಾಗುತ್ತದೆ, ಇದಲ್ಲದೆ, ಇದು ಮೂತ್ರದಲ್ಲಿ ಏನನ್ನೂ ಪ್ರವೇಶಿಸಲು ಬಿಡುವುದಿಲದಲ. ನಿಮ್ಮ ಕಿಡ್ನಿಯಲ್ಲಿ ಕಲ್ಲುಗಳಿದ್ದರೆ ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.

ಟೊಮೆಟೊ ಟೊಮ್ಯಾಟೋಗಳಲ್ಲಿ ಆಕ್ಸಲೇಟ್ಗಳಲ್ಲಿ ಸಮೃದ್ಧವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೂತ್ರಪಿಂಡದ ಕಲ್ಲು ಹೊಂದಿರುವ ರೋಗಿಗಳು ಟೊಮೆಟೊಗಳನ್ನು ತಿನ್ನಬಾರದು. ನೀವು ತಿನ್ನಲು ಬಯಸಿದರೆ, ಎಲ್ಲಾ ಬೀಜಗಳನ್ನು ತೆಗೆದು ತಿನ್ನಿರಿ.

ಚಾಕೊಲೇಟ್ ಕಿಡ್ನಿಯಲ್ಲಿ ಕಲ್ಲು ಇರುವವರು ಚಾಕಲೇಟ್ಗಳಿಂದ ದೂರವಿರಬೇಕು. ಚಾಕೊಲೇಟ್ ಆಕ್ಸಲೇಟ್ಗಳನ್ನು ಹೊಂದಿರುತ್ತದೆ, ಇದು ಕಲ್ಲುಗಳ ಗಾತ್ರವನ್ನು ಹೆಚ್ಚಿಸುತ್ತದೆ.

ಚಹಾ ಕಿಡ್ನಿಯಲ್ಲಿ ಕಲ್ಲು ಇರುವವರು ಚಹಾ ಸೇವನೆ ಹೆಚ್ಚು ಮಾಡಬಾರದು. ಏಕೆಂದರೆ ಅದು ಅವರಿಗೆ ಹಾನಿ ಮಾಡುತ್ತದೆ. ಚಹಾವು ಕಲ್ಲಿನ ಗಾತ್ರವನ್ನು ಹೆಚ್ಚಿಸುತ್ತದೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow