King is Back.. ಕ್ಯಾನ್ಸರ್ ಚಿಕಿತ್ಸೆ ಬಳಿಕ ಬೆಂಗಳೂರಿಗೆ ಶಿವರಾಜ್ ಕುಮಾರ್ ಆಗಮನ!

ಜನವರಿ 26, 2025 - 12:03
 0  13
King is Back.. ಕ್ಯಾನ್ಸರ್ ಚಿಕಿತ್ಸೆ ಬಳಿಕ ಬೆಂಗಳೂರಿಗೆ ಶಿವರಾಜ್ ಕುಮಾರ್ ಆಗಮನ!

 ಆರೋಗ್ಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ನಟ ಶಿವರಾಜ್ ಕುಮಾರ್ ಅವರು 35 ದಿನಗಳ ನಂತರ ಬೆಂಗಳೂರಿಗೆ ಇಂದು ವಾಪಸ್ಸಾಗಿದ್ದಾರೆ. ಗುಣಮುಖರಾಗಿ ಮರಳಿದ ಶಿವರಾಜ್ ಕುಮಾರ್ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ಶಿವಣ್ಣನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹಲವು ಸಿನಿಮಾ ಸೆಲೆಬ್ರಿಟಿಗಳು, ಆಪ್ತರು, ಕುಟುಂಬದವರು ಆಗಮಿಸಿದ್ದರು.

ವಿಮಾನ ನಿಲ್ದಾಣದ ಬಳಿಯ ಟೋಲ್​ ಗೇಟ್​ನಲ್ಲಿ ಅಭಿಮಾನಿಗಳು ಶಿವಣ್ಣನಿಗೆ ಆಪಲ್ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಶಿವಣ್ಣ ಸಹ ಕಾರು ನಿಲ್ಲಿಸಿ ಅಭಿಮಾನಿಗಳು ಸ್ವಾಗತ ಸ್ವೀಕರಿಸಿದ್ದಾರೆ. ಸ್ವಾಗತ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿ, ಮಾನ್ಯತಾ ಟೆಕ್ ಪಾರ್ನ್​ನ ಮನೆಯತ್ತ ಪ್ರಯಾಣ ಬೆಳೆಸಿದ್ದಾರೆ.

ಶಿವರಾಜ್ ಕುಮಾರ್ ಅವರು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲೆಂದು 35 ದಿನಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಮಿಸಿಸಿಪ್ಪಿ ಕ್ಯಾನ್ಸರ್ ಇನ್​ಸ್ಟಿಟ್ಯೂಷನ್​ನಲ್ಲಿ ಶಿವರಾಜ್ ಕುಮಾರ್ ಅವರಿಗೆ ಶಸ್ತಚಿಕಿತ್ಸೆ ಮಾಡಲಾಯ್ತು. ಶಿವಣ್ಣ ಅವರು ಅಲ್ಲಿಯೇ ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದು ಇದೀಗ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಶಿವರಾಜ್ ಕುಮಾರ್ ಅವರ ಜೊತೆಯಲ್ಲಿ ಗೀತಾ ಶಿವರಾಜ್ ಕುಮಾರ್, ಅವರ ಪುತ್ರಿ ನಿವೇದಿತಾ, ಮಧು ಬಂಗಾರಪ್ಪ ಅವರುಗಳು ಸಹ ಅಮೆರಿಕಕ್ಕೆ ತೆರಳಿದ್ದರು.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow