Low Interest Home Loan: ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ಪಡೆಯುವ ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ..!

ಎಪ್ರಿಲ್ 25, 2025 - 08:09
 0  9
Low Interest Home Loan: ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ಪಡೆಯುವ ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ..!

 

ಮನೆ ಖರೀದಿ ಬಹುತೇಕರ ಜೀವನದ ಬಹುದೊಡ್ಡ ಕನಸು. ಕೆಲವರು ಸಾಲ ಪಡೆಯದೆ ಸ್ವಂತ ಮನೆ ಕಟ್ಟಬಹುದು ಅಥವಾ ಖರೀದಿಸಬಹುದು. ಆದರೆ, ಬಹುತೇಕರ ಪಾಲಿಗೆ ಮನೆ ಖರೀದಿ ಕನಸು ಈಡೇರಿಸಿಕೊಳ್ಳಲು ಗೃಹಸಾಲ ಪಡೆಯುವುದು ಅನಿವಾರ್ಯ. ಗೃಹಸಾಲಕ್ಕೆ ಅರ್ಜಿ ಸಲ್ಲಿಸುವ ಸಮಯದಿಂದ ಸಾಲ ಮರುಪಾವತಿಸುವವರೆಗೆ ಹತ್ತು ಹಲವು ಸಮಸ್ಯೆಗಳು, ಸವಾಲುಗಳು ಎದುರಾಗುತ್ತವೆ. ಇದಕ್ಕೆಲ್ಲ ಸಿದ್ಧವಾಗಿಯೇ ಸಾಲ ಪಡೆಯಲು ಮುಂದಾಗುವುದು ಒಳ್ಳೆಯದು.

ಪರಿಣಾಮವಾಗಿ ಸಾಲದ ಮೇಲಿನ ಬಡ್ಡಿ ದರಗಳು ಹೆಚ್ಚಾಗಿವೆ. ಅದೇ ರೀತಿ ಇಎಂಐ (EMIs) ಕೂಡ ದುಬಾರಿಯಾಗಿ ಪರಿಣಮಿಸಿದೆ. ಹೊಸದಾಗಿ ವೈಯಕ್ತಿಕ, ಗೃಹ ಹಾಗೂ ಕಾರು ಸಾಲ ಪಡೆಯುವವರಿಗೆ ಬಡ್ಡಿದರ ಹೆಚ್ಚಳದ ಬಿಸಿ ತಟ್ಟುತ್ತಿದೆ. ಇದರ ಹೊರತಾಗಿಯೂ ನೀವು ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲಗಳನ್ನು ಪಡೆಯಲು ಅವಕಾಶವಿದೆ. ಹೇಗೆಂಬ ಮಾಹಿತಿ ಇಲ್ಲಿದೆ;

ಹಬ್ಬದ ಆಫರ್ಗಳು:

ಪ್ರತಿ ಹಬ್ಬದ ಅವಧಿಯಲ್ಲಿ ಹೆಚ್ಚಿನ ಬ್ಯಾಂಕ್ಗಳು ಹಬ್ಬದ ವಿಶೇಷ ಆಫರ್ಗಳನ್ನು ನೀಡುತ್ತವೆ. ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುತ್ತವೆ.

ಕೆಲವು ಬ್ಯಾಂಕ್ಗಳು ಹಬ್ಬದ ಋತುವಿನಲ್ಲಿ ಗೃಹ ಸಾಲದ ಮೇಲಿನ ಪ್ರೊಸೆಸಿಂಗ್ ಶುಲ್ಕದಿಂದ ಗ್ರಾಹಕರಿಗೆ ವಿನಾಯಿತಿ ನೀಡುತ್ತವೆ. ಅಲ್ಲದೆ ಇತರ ಶುಲ್ಕಗಳಿಂದಲೂ ವಿನಾಯಿತಿ ನೀಡುತ್ತವೆ. ಸೌಲಭ್ಯಗಳು ಗೃಹ ಸಾಲವನ್ನು ಕಡಿಮೆ ವೆಚ್ಚದಾಯಕವಾಗಿಸಬಲ್ಲವು.

ಕ್ರೆಡಿಟ್ ಸ್ಕೋರ್:

ಸಾಲ ಪಡೆಯಲು ಗ್ರಾಹಕರು ಎಷ್ಟು ಅರ್ಹರು ಎಂಬುದನ್ನು ನಿರ್ಧರಿಸುವ ಹಾಗೂ ಗ್ರಾಹಕರ ಸಾಲದ ದಾಖಲೆಗಳಿಗೆ ಸಂಬಂಧಿಸಿದ 3 ಅಂಕಿಗಳ ಒಂದು ಸಂಖ್ಯೆಯೇ ಕ್ರೆಡಿಟ್ ಸ್ಕೋರ್. ನಾವು ಎಷ್ಟು ಸಾಲ ಪಡೆದಿದ್ದೇವೆ, ಎಷ್ಟರ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡುತ್ತಿದ್ದೇವೆ ಎಂಬುದರ ಆಧಾರದಲ್ಲಿ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಗೃಹ ಸಾಲ ಪಡೆಯಲು ಮುಂದಾದಾಗ ಗ್ರಾಹಕರ ಕ್ರೆಡಿಟ್ ಸ್ಕೋರ್ ಅನ್ನು ಮೌಲ್ಯಮಾಪನ ಮಾಡಿ ಬ್ಯಾಂಕ್ಗಳು ಸಾಲ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ.

ಉತ್ತಮವಾದ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಅಂಥ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡಲು ಬ್ಯಾಂಕ್ಗಳು ಮುಂದಾಗುತ್ತವೆ. ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಹೋಲಿಸಿದರೆ, ಬ್ಯಾಂಕ್ಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಸಾಧ್ಯತೆ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದವರಿಗೇ ಹೆಚ್ಚಾಗಿದೆ.

ಆಯ್ಕೆಗಳನ್ನು ಪರಿಶೀಲಿಸಬೇಕು:

ಅನೇಕ ಬ್ಯಾಂಕ್ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ವಿವಿಧ ಬಡ್ಡಿ ದರಗಳಲ್ಲಿ ಗೃಹ ಸಾಲ ನೀಡುತ್ತವೆ. ಹೀಗಾಗಿ ಆಯ್ಕೆಗಳನ್ನು ಪರಿಶೀಲಿಸಿ ಕಡಿಮೆ ಬಡ್ಡಿ ದರದಲ್ಲಿ ದೊರೆಯುವ ಸಾಲಗಳನ್ನೇ ಪರಿಗಣಿಸುವುದು ಉತ್ತಮ ಆಯ್ಕೆಯಾಗಿದೆ ಎಂದುಎನ್ಡಿಟಿವಿ ಪ್ರಾಫಿಟ್ಸಲಹೆ ನೀಡಿದೆ.

ಗ್ರಾಹಕರ ವೃತ್ತಿ, ಕ್ರೆಡಿಟ್ ಇತಿಹಾಸದ ಆಧಾರದಲ್ಲಿ ಬಡ್ಡಿ ದರಗಳು ಬದಲಾಗಬಹದು. ಗ್ರಾಹಕರು ಬಯಸುವ ಸಾಲದ ಮೊತ್ತ ಮತ್ತು ಮರುಪಾವತಿಗಾಗಿ ಅವರು ಆಯ್ಕೆ ಮಾಡಿರುವ ಅವಧಿ ಕೂಡ ಬಡ್ಡಿದರದ ಮೇಲೆ ಪರಿಣಾಮ ಬೀರಬಹುದು.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow