Lucky Baskhar: ಲಕ್ಕಿ ಭಾಸ್ಕರ್ ಎಫೆಕ್ಟ್: ಬ್ಯಾಂಕ್ ಗೆ ಬಂದ ವೃದ್ಧೆ ಗ್ರಾಹಕಿಗೆ 50 ಲಕ್ಷ ದೋಖಾ

ಮಾರ್ಚ್ 16, 2025 - 21:01
 0  16
Lucky Baskhar: ಲಕ್ಕಿ ಭಾಸ್ಕರ್ ಎಫೆಕ್ಟ್: ಬ್ಯಾಂಕ್ ಗೆ ಬಂದ ವೃದ್ಧೆ ಗ್ರಾಹಕಿಗೆ 50 ಲಕ್ಷ ದೋಖಾ

ಸಿನಿಮಾನ ಸಿನಿಮಾ ತರ ನೋಡಿ ಎಂಜಾಯ್ಮಾಡೋದನ್ನು ಮೊದಲು ಪ್ರೇಕ್ಷಕರು ಕಲಿಯಬೇಕು. ಎಲ್ಲಾ ಅಂತಲ್ಲ, ಒಂದಿಷ್ಟು ಮಂದಿ ಸಿನಿಮಾ ನೋಡಿ ಅದರಿಂದ ಪ್ರೇರಿತರಾಗಿ ಸಿನಿಮಾದಲ್ಲಿ ಹೀರೋ ಮಾಡಿದ ಕೆಲಸವನ್ನು ಮಾಡೋದಕ್ಕೆ ಮುಂದಾಗ್ತಾರೆ. ಇಂಥದ್ದೊಂದು ಘಟನೆ ಈಗ ಮತ್ತೆ ನಡೆದಿದೆ. ತೆಲುಗಿನ ಲಕ್ಕಿ ಭಾಸ್ಕರ್ ಸಿನಿಮಾ ಮಾದರಿಯಲ್ಲಿ ಖಾಸಗಿ ಬ್ಯಾಂಕ್ವೊಂದರ ಉಪ ವ್ಯವಸ್ಥಾಪಕಿ ವೃದ್ಧೆಗೆ ವಂಚಿಸಿದ್ದಾಳೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಶಾಮೀಲಾಗಿದ್ದು, ಗಿರಿನಗರ ಪೊಲೀಸರು  ಬಂಧಿಸಿದ್ದಾರೆ. ಬ್ಯಾಂಕ್ಉಪ ವ್ಯವಸ್ಥಾಪಕಿ ಮೇಘನಾ, ಆಕೆಯ ಪತಿ ಶಿವಪ್ರಸಾದ್, ಸ್ನೇಹಿತರಾದ ವರದರಾಜು ಮತ್ತು ಅನ್ವರ್ ಘೋಷ್ ಬಂಧಿತ ಆರೋಪಿಗಳು.

ಗಿರಿನಗರದಲ್ಲಿರುವ ಇಂಡಸ್ ಇಂಡ್ ಬ್ಯಾಂಕ್​​ ಉಪ ವ್ಯವಸ್ಥಾಪಕಿ ಮ್ಯಾನೆಜರ್ ಮೇಘನಾ ಎಫ್ಡಿ ಅಕೌಂಟ್ ಮಾಡಿಕೊಡುವುದಾಗಿ ವೃದ್ಧೆಗೆ ಸುಳ್ಳು ಹೇಳಿ ಆರ್ಟಿಜಿಎಸ್ ಕಾಗದಕ್ಕೆ ಸಹಿ ಮಾಡಿಸಿಕೊಂಡಿದ್ದಾಳೆ. ಬಳಿಕ ತಮ್ಮ ಹೊಸ ಬ್ಯಾಂಕ್ ಖಾತೆ ತೆಗೆದು ಆರ್ಟಿಜಿಎಸ್ ಮುಖಾಂತರ 50 ಲಕ್ಷ ರೂಪಾಯಿ ವರ್ಗಾಯಿಸಿಕೊಂಡಿದ್ದಾಳೆ.

ಮೇಘನಾ ಹೆಣೆದ ಮೋಸದ ಜಾಲ ಹೇಗಿತ್ತು?

ವೃದ್ಧ ದಂಪತಿ ಗಿರಿನಗರದಲ್ಲಿನ ಇಂಡಸ್ ಇಂಡ್ ಬ್ಯಾಂಕ್ನಲ್ಲಿ ಜಂಟಿ ಖಾತೆ ತೆರೆದಿದ್ದಾರೆ. ಇದೇ ಬ್ಯಾಂಕ್ನಲ್ಲಿ ಎಫ್ ಡಿ ಖಾತೆ ಕೂಡ ಹೊಂದಿದ್ದಾರೆ. ವೃದ್ಧೆಗೆ ಬ್ಯಾಂಕ್ನಲ್ಲಿ ಉಪ ವ್ಯವಸ್ಥಾಪಕಿ ಮೇಘನಾ ಪರಿಚಯವಾಗಿದೆ. ಮೇಘನಾ ವೃದ್ಧೆಗೆ ಬ್ಯಾಂಕ್ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದಳು. ಕುಟುಂಬದ ಎಲ್ಲ ವಿಚಾರವನ್ನು ಮೇಘನಾ ಜೊತೆ ವೃದ್ಧೆ ಹಂಚಿಕೊಳ್ಳುತ್ತಿದ್ದಳು. ಚಾಮರಾಜಪೇಟೆಯಲ್ಲಿನ ಮನೆ ಮಾರಿರುವ ವಿಚಾರವನ್ನು ಕೂಡ ವೃದ್ಧೆ, ಮೇಘನಾಗೆ ಹೇಳಿದ್ದಳು.

ಮನೆ ಮಾರಾಟದಿಂದ ವೃದ್ಧ ದಂಪತಿಯ ಬ್ಯಾಂಕ್ ಖಾತೆಗೆ ಒಂದು ಕೋಟಿ ಹಣ ಜಮೆಯಾಗಿತ್ತು. ಒಂದು ದಿನ, ವೃದ್ಧೆ ಬ್ಯಾಂಕ್ಗೆ ಹೋದಾಗ ಎರಡು ಬಾಂಡ್ ಅವಧಿ ಮುಗಿದಿದೆ ಎಂದು ಮೇಘಟನಾ ಕಥೆ ಕಟ್ಟಿದ್ದಾಳೆ. ಹೊಸ ಬಾಂಡ್ ಖರೀದಿಗೆ ದಾಖಲಾತಿ ಮತ್ತು ಚೆಕ್ ಅವಶ್ಯಕತೆ ಇದೆ ಎಂದು ಹೇಳಿದ್ದಾಳೆ. ಬಳಿಕ, ಮೇಘನಾ, ವೃದ್ಧೆ ಮನೆಗೆ ತೆರಳಿ ಎರಡು ಖಾಲಿ ಚೆಕ್ಮೇಲೆ ಸಹಿ ಮಾಡಿಸಿಕೊಂಡಿದ್ದಾಳೆ. ಜೊತೆಗೆ, ಒಂದಿಷ್ಟು ಕಾಗದ ಪತ್ರಗಳಿಗೂ ಸಹಿ ಪಡೆದಿದ್ದಾಳೆ. ವೇಳೆ, ಎಫ್ಡಿ ಬದಲಾಗಿ ಆರ್ಟಿಜಿಎಸ್ ಪತ್ರಕ್ಕೂ ಸಹಿ ಪಡೆದಿದ್ದಾಳೆ.

ಒಂದು ದಿನ ವೃದ್ಧ ದಂಪತಿ ಮಗ ಮೊಬೈಲ್ನಲ್ಲಿ ಖಾತೆ ಪರಿಶೀಲೀಸಿದಾಗ ಹಣ ಕಡಿಮೆ ಇರುವುದು ಪತ್ತೆಯಾಗಿದೆ. ಬಳಿಕ, ಬ್ಯಾಂಕ್ನಿಂದ ಬಂದಿದ್ದ ಮೆಸೆಜ್ಗಳ ಪರಿಶೀಲಿಸಿದ್ದಾರೆ. ವೇಳೆ ಫೆಬ್ರವರಿ 13 ರಂದು ಬೇರೆ ಖಾತೆಗೆ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ನಂತರ ವೃದ್ಧೆ ಬ್ಯಾಂಕ್ಗೆ ಹೋಗಿ ಮೇಘಾಳನ್ನು ಪ್ರಶ್ನಿಸಿದಾಗ, “ನೀವು ಹೇಳಿದ ಖಾತೆಗೆ ಆರ್ಟಿಜಿಎಸ್ ಮಾಡಲಾಗಿದೆಎಂದು ಹೇಳಿದ್ದಾಳೆ.

ವೃದ್ಧೆ, ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಅಸಲಿ ಸತ್ಯ ಬಾಯಿಬಿಟ್ಟಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow