Mid Season Finale: Bigg Boss ಕನ್ನಡ 12ರಲ್ಲಿ ಬಿಗ್ ಟ್ವಿಸ್ಟ್: ಇದೇ ಮೊದಲ ಬಾರಿಗೆ ಮಿಡ್-ಸೀಸನ್ ಫಿನಾಲೆ!‌

ಅಕ್ಟೋಬರ್ 13, 2025 - 16:09
 0  8
Mid Season Finale: Bigg Boss ಕನ್ನಡ 12ರಲ್ಲಿ ಬಿಗ್ ಟ್ವಿಸ್ಟ್: ಇದೇ ಮೊದಲ ಬಾರಿಗೆ ಮಿಡ್-ಸೀಸನ್ ಫಿನಾಲೆ!‌

ಬಿಗ್​​ಬಾಸ್ ಕನ್ನಡ ಸೀಸನ್ 12  ಪ್ರಾರಂಭವಾಗಿ ಎರಡು ವಾರಗಳಾಗಿವೆ. 12 ಸೀಸನ್ ಈ ವರೆಗೆ ನಡೆದಿದೆ. ಒಂದು ಒಟಿಟಿ ಶೋ ಸಹ ನಡೆದಿದೆ. ಆದರೆ ಕೋವಿಡ್ ಹೊರತಾಗಿ ಇನ್ಯಾವ ವರ್ಷವೂ ಸಹ ಬಿಗ್​​ಬಾಸ್ ನಿಂತಿಲ್ಲ. ಆದರೆ ಈ ವರ್ಷ ಒಂದು ದಿನದ ಮಟ್ಟಿಗೆ ಶೋ ನಿಂತಿತ್ತು. ಬಿಗ್​​ಬಾಸ್ ಮನೆಯ ಸ್ಪರ್ಧಿಗಳನ್ನು ಮನೆಯಿಂದ ಸ್ಥಳಾಂತರ ಮಾಡಿ ರೆಸಾರ್ಟ್​​ನಲ್ಲಿ ಇಡಲಾಗಿತ್ತು. ಆದರೆ ಸುದೀಪ್ ಹಾಗೂ ಇನ್ನೂ ಕೆಲವರ ಪ್ರಯತ್ನದಿಂದ ಕೇವಲ 24 ಗಂಟೆಗಳಲ್ಲಿ ಮತ್ತೆ ಸ್ಪರ್ಧಿಗಳೆಲ್ಲ ಮನೆ ಸೇರಿದರು.

ಇದರ ನಡುವೆ ಇದೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಫಿನಾಲೆ ನಡೆಯಲಿದೆ. ಇದು ನಿರೀಕ್ಷೆಗೂ ಮೀರಿದ, ಕುತೂಹಲಕರ ತಿರುವುಗಳನ್ನು ತರಲಿದೆ.ಈ ಫಿನಾಲೆಯಲ್ಲಿ ಭಾರೀ `ಎಲಿಮಿನೇಷನ್’ ನಡೆಯಲಿದ್ದು, ಜೊತೆಗೆ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಲ್ಲಿ ಕಾಲಿಡುತ್ತಿದ್ದಾರೆ. ಇವರ ಆಗಮನದಿಂದ ಈಗಾಗಲೇ ಇರುವ ಸ್ಪರ್ಧಿಗಳ ಆಟಕ್ಕೆ ಹೊಸ ಉತ್ಸಾಹ ಮತ್ತು ತಿರುವು ಸಿಗಲಿದೆ. ಇದಲ್ಲದೆ, ಈ ಬಾರಿ ಮಿಡ್ ಸೀಸನ್ ವಿನ್ನರ್ ಯಾರೆಂದು ಘೋಷಿಸಲಾಗುವುದು ಮತ್ತು ಅವರಿಗೆ ಬಹುಮಾನ ಕೂಡಾ ನೀಡಲಾಗುತ್ತದೆ.

ಈ ವಾರಾಂತ್ಯ ಪ್ರೇಕ್ಷಕರಿಗೆ ನೃತ್ಯ ಪ್ರದರ್ಶನ, ಹಾಸ್ಯಭರಿತ ಮಾತುಕತೆ ಹಾಗೂ ಅನಿರೀಕ್ಷಿತ ಸೆಲೆಬ್ರಿಟಿಗಳು ಕೂಡಾ ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಅವರು ಮನೆಯಲ್ಲಿ ಆಟಗಳನ್ನು ಆಡುವುದಲ್ಲದೇ, ಸ್ಪರ್ಧಿಗಳೊಂದಿಗೆ ಬೆರೆಯುತ್ತಾ ಮರೆಯಲಾಗದ ಮನರಂಜನೆ ನೀಡಲಿದ್ದಾರಂತೆ. ಒಟ್ಟು 6 ಗಂಟೆಗಳ ಮನರಂಜನಾ ಸಂಭ್ರಮ ಇದಾಗಿದೆ. ಅಕ್ಟೋಬರ್ 18 ಮತ್ತು 19 ರಂದು ಕಲರ್ಸ್ ಕನ್ನಡದಲ್ಲಿ ರಾತ್ರಿ 8 ರಿಂದ 11 ಗಂಟೆಗಳವರೆಗೆ ಪ್ರಸಾರವಾಗುವ ಮಿಡ್ ಸೀಸನ್ ಫಿನಾಲೆ ಈಗಿನಿಂದಲೇ ಕುತೂಹಲ ಮೂಡಿಸಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow