Myanmar Earthquake: ಮ್ಯಾನ್ಮಾರ್‌ʼನಲ್ಲಿ ಪ್ರಬಲ ಭೂಕಂಪ: ಬರೋಬ್ಬರಿ ಸಾವಿನ ಸಂಖ್ಯೆ 1,000ಕ್ಕೆ ಏರಿಕೆ..! 2,376 ಮಂದಿಗೆ ಗಾಯ

ಮಾರ್ಚ್ 29, 2025 - 14:01
 0  19
Myanmar Earthquake: ಮ್ಯಾನ್ಮಾರ್‌ʼನಲ್ಲಿ ಪ್ರಬಲ ಭೂಕಂಪ: ಬರೋಬ್ಬರಿ ಸಾವಿನ ಸಂಖ್ಯೆ 1,000ಕ್ಕೆ ಏರಿಕೆ..! 2,376 ಮಂದಿಗೆ ಗಾಯ

ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ದೇಶದ ಎರಡನೇ ಅತಿದೊಡ್ಡ ನಗರವಾದ ಮಂಡಲೇಯಲ್ಲಿ ಹಲವಾರು ಕಟ್ಟಡಗಳು ಕುಸಿದವು. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿಯೂ ಕಟ್ಟಡಗಳು ನಡುಗಿದವು. ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಭೂಕಂಪವು 10 ಕಿ.ಮೀ ಆಳದಲ್ಲಿದೆ ಎಂದು ಹೇಳಿದೆ. ಇನ್ನೂ ಭೀಕರ ಭೂಕಂಪಕ್ಕೆ 1,000ಕ್ಕೆ ಏರಿಕೆಯಾಗಿದ್ದು, 2,376 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಗಳು ವರದಿ ಮಾಡಿವೆ.

ಮ್ಯಾನ್ಮಾರ್‌ನಲ್ಲಿ ಶುಕ್ರವಾರ 11:50ರ ಹೊತ್ತಿಗೆ ಮೊದಲ ಬಾರಿಗೆ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಇದಾದಗ 15 ನಿಮಿಷಗಳಲ್ಲೇ ಮತ್ತೊಮ್ಮೆ 6.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅಲ್ಲದೇ ಶುಕ್ರವಾರ ರಾತ್ರಿ 11:56ರ ವೇಳೆ ಮ್ಯಾನ್ಮಾರ್‌ನಲ್ಲಿ 6ನೇ ಬಾರಿಗೆ ಭೂಕಂಪನವಾಗಿದ್ದು,

 ರಿಕ್ಟರ್‌ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿತ್ತು. ಹೀಗಾಗಿ ಮ್ಯಾನ್ಮಾರ್‌ ಮತ್ತು ಥೈಲ್ಯಾಂಡ್‌ ಎರಡೂ ಕಡೆ ಸೇರಿ ಒಟ್ಟು ಸಾವಿನ ಸಂಖ್ಯೆ ಸಾವಿರಕ್ಕೆ ಏರಿಕೆಯಾಗಿದೆ. ಅಲ್ಲದೇ ಅವಶೇಷಗಳ ಅಡಿ ಇನ್ನೂ ನೂರಾರು ಮಂದಿ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾವಿಸಿರುವ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow