Narendra Modi: 3 ವಂದೇ ಭಾರತ್ ಎಕ್ಸ್ ಪ್ರೆಸ್ʼಗೆ ಪ್ರಧಾನಿ ಮೋದಿ ಚಾಲನೆ..!
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಮತ್ತು ಬೆಳಗಾವಿ ನಡುವಿನ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಟ್ರೈನ್ಗೆ ಹಸಿರು ನಿಶಾನೆ ತೋರಿದ ಮೋದಿ, ಇನ್ಮುಂದೆ ಈ ಮಾರ್ಗದಲ್ಲಿ ಸೂಪರ್ಫಾಸ್ಟ್ ರೈಲು ಸಂಚರಿಸಲು ದಾರಿ ಮಾಡಿಕೊಟ್ಟರು.
ವಂದೇ ಭಾರತ್ ರೈಲು ಉತ್ತರ ಕರ್ನಾಟಕದ ಮಂದಿಯ ಬಹುದಿನಗಳ ಕನಸಾಗಿದ್ದು, ಇದು ಕರ್ನಾಟಕದ 11ನೇ ವಂದೇ ಭಾರತ್ ರೈಲು ಎನ್ನುವ ಖ್ಯಾತಿ ಪಡೆದಿದೆ. ರೈಲು ಒಟ್ಟು 8 ಜಿಲ್ಲೆಗಳ ಮೂಲಕ ಸಂಚರಿಸಲಿದ್ದು, ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳ ಕಾಲ ಸೇವೆ ಲಭ್ಯವಿರಲಿದೆ.
ನಿಮ್ಮ ಪ್ರತಿಕ್ರಿಯೆ ಏನು?