Okra: ಬೆಂಡೆಕಾಯಿಯಲ್ಲಿದೆ ಔಷಧಿಗಳ ಖಜಾನೆ! ಅಡುಗೆಗೆ ಬಳಸಿದ್ರೆ ಆರೋಗ್ಯಕ್ಕೂ ಒಳ್ಳೆಯದು

ಫೆಬ್ರವರಿ 10, 2025 - 07:07
 0  7
Okra: ಬೆಂಡೆಕಾಯಿಯಲ್ಲಿದೆ ಔಷಧಿಗಳ ಖಜಾನೆ! ಅಡುಗೆಗೆ ಬಳಸಿದ್ರೆ ಆರೋಗ್ಯಕ್ಕೂ ಒಳ್ಳೆಯದು

 

ಬೆಂಡೆಕಾಯಿ ಭಾರತೀಯ ಮನೆಗಳಲ್ಲಿ ವ್ಯಾಪಕವಾಗಿ ಸೇವಿಸಲ್ಪಡುವ ತರಕಾರಿಯಾಗಿದೆ. 100 ಗ್ರಾಂ ಬೆಂಡೆಕಾಯಿಯಲ್ಲಿ 7.03 ಗ್ರಾಂ ಕಾರ್ಬೋಹೈಡ್ರೇಟ್ಗಳು, 2 ಗ್ರಾಂ ಪ್ರೋಟೀನ್, 0.1 ಗ್ರಾಂ ಕೊಬ್ಬು ಮತ್ತು 9% ಫೈಬರ್ ಹೊಂದಿರುತ್ತದೆ. ಇದು ಫೋಲೇಟ್, ನಿಯಾಸಿನ್, ವಿಟಮಿನ್ C, E ಮತ್ತು K ಗಳಿಂದ ತುಂಬಿರುತ್ತದೆ. ಇದಲ್ಲದೆ ಇದು ಕ್ಯಾಲ್ಸಿಯಂ, ತಾಮ್ರ, ಕಬ್ಬಿಣ, ಮೆಗ್ನೀಸಿಯಮ್, ಮ್ಯಾಂಗನೀಸ್, ಫಾಸ್ಫರಸ್ ಮತ್ತು ಸತುವುಗಳಲ್ಲಿ ಸಮೃದ್ಧವಾಗಿದೆ. ಇದರ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು

ಬೆಂಡೆಕಾಯಿಯು ತೂಕ ಇಳಿಸಲು ನೆರವಾಗುವುದು

ಬೆಂಡೆಕಾಯಿಯಲ್ಲಿ ಇರುವ ತುಂಬಾ ಕಡಿಮೆ ಕ್ಯಾಲರಿ (30ಕೆಸಿಎಎಲ್/100ಗ್ರಾಂ) ತೂಕ ಇಳಿಸಲು ಒಂದು ಅತ್ಯುತ್ತಮ ಆಹಾರ. ಇದು ತುಂಬಾ ಕಡಿಮೆ ಕ್ಯಾಲರಿ ನೀಡುವುದು. ಅಷ್ಟೇ ಅಲ್ಲದೇ ಬೆಂಡೆಕಾಯಿಯಲ್ಲಿ ಉನ್ನತ ಮಟ್ಟದ ನಾರಿನಾಂಶವಿದ್ದು, ಇದು ಹೊಟ್ಟೆಯು ದೀರ್ಘಕಾಲ ತುಂಬಿರುವಂತೆ ಮಾಡುವುದು.

ಹೃದಯ ಕಾಯಿಲೆಗೆ ಒಳ್ಳೆಯದು

ಬೆಂಡೆಕಾಯಿಯಲ್ಲಿ ಹೀರಿಕೊಳ್ಳುವ ನಾರಿನಾಂಶ ಪೆಕ್ಟಿನ್ ಇದೆ. ಪೆಕ್ಟಿನ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು ಮತ್ತು ಅಪಧಮನಿಕಾಠಿಣ್ಯ ತಡೆಯುವುದು. ಜಮೆಯಾಗಿರುವಂತಹ ಕೊಲೆಸ್ಟ್ರಾಲ್ ಮತ್ತು ಹೆಪ್ಪುಗಟ್ಟುವಿಕೆಯನ್ನು ಇದು ತಡೆಯುವುದು.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು

ಬೆಂಡೆಕಾಯಿಯಲ್ಲಿ ಇರುವಂತಹ ನಾರಿನಾಂಶವು ಇದಕ್ಕೆ ಪ್ರಮುಖ ಕಾರಣವಾಗಿದೆ. ಯುಜೆನಾಲ್ ಎನ್ನುವಂತಹ ಒಂದು ರೀತಿಯ ನಾರಿನಾಂಶವು ಜೀರ್ಣಕ್ರಿಯೆ ನಿಧಾನಗೊಳಿಸುವುದು ಮತ್ತು ರಕ್ತನಾಳದಲ್ಲಿ ಇರುವಂತಹ ಸಕ್ಕರೆ ಹೀರಿಕೊಳ್ಳುವುದು. ಊಟದ ಬಳಿಕ ಸಕ್ಕರೆ ಮಟ್ಟವು ಏರಿಕೆ ಆಗುವುದನ್ನು ಇದು ತಡೆಯುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದು. ನಾರಿನಾಂಶವು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಜೀರ್ಣಕ್ರಿಯೆಗೆ ಸಹಕಾರಿ

ಬೆಂಡೆಕಾಯಿಯಲ್ಲಿ ಇರುವಂತಹ ನಾರಿನಾಂಶವು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಇದು ಕರುಳಿನ ಕ್ರಿಯೆಯನ್ನು ನಿಯಂತ್ರಿಉಸುವುದ. ಪೆಕ್ಟಿನ್ ಕರುಳಿನಲ್ಲಿ ಊದಿಕೊಂಡು ಕರುಳಿನಲ್ಲಿರುವಂತಹ ಕಲ್ಮಷವು ಸುಲಭವಾಗಿ ಹೊರಹೋಗುವಂತೆ ಮಾಡುವುದು. ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಬೆಂಡೆಕಾಯಿ ತಿಂದರೆ ಅದರಿಂದ ಲಾಭ ಪಡೆಯಬಹುದು.

ಗರ್ಭಧಾರಣೆಗೆ ನೆರವಾಗುವುದು

ಗರ್ಭ ಧರಿಸಬೇಕು ಎಂದು ಬಯಸುವವರಿಗೆ ಬೆಂಡೆಕಾಯಿಯು ತುಂಬಾ ಒಳ್ಳೆಯ ಆಹಾರವಾಗಿದೆ. ಬೆಂಡೆಕಾಯಿಯಲ್ಲಿ ಇರುವಂತಹ ಫಾಲಿಕ್ ಆಮ್ಲವು ಗರ್ಭ ಧರಿಸಲು ನೆರವಾಗುವುದು ಮಾತ್ರವಲ್ಲದೆ ಇದು ಭ್ರೂಣದ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸುವುದು. ಬೆಂಡೆಕಾಯಿಯು ಗರ್ಭಪಾತವಾಗದಂತೆ ತಡೆಯುವುದು. ಭ್ರೂಣದ ನರಕೊಳವೆಗಳು ಬೆಳೆಯಲು ಫಾಲಿಕ್ ಆಮ್ಲವು ನೆರವಾಗುವುದು.

 

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow