ಪಾಕಿಸ್ತಾನದಲ್ಲಿ ಭಾರಿ ಬಾಂಬ್ ಸ್ಫೋಟ: 8 ಸಾವು, ಹಲವಾರು ಮಂದಿಗೆ ಗಂಭೀರ ಗಾಯ

ಸೆಪ್ಟೆಂಬರ್ 30, 2025 - 16:01
 0  10
ಪಾಕಿಸ್ತಾನದಲ್ಲಿ ಭಾರಿ ಬಾಂಬ್ ಸ್ಫೋಟ: 8 ಸಾವು, ಹಲವಾರು ಮಂದಿಗೆ ಗಂಭೀರ ಗಾಯ

ಇಸ್ಲಾಮಾಬಾದ್:- ಬಾಂಬ್ ಸ್ಫೋಟಗೊಂಡು ಪಾಕಿಸ್ತಾನದಲ್ಲಿ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಜರುಗಿದೆ. ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಸ್ಫೋಟದ ಶಬ್ದ ಎಷ್ಟು ಪ್ರಬಲವಾಗಿತ್ತೆಂದರೆ ಅದು ಮೈಲುಗಳಷ್ಟು ದೂರದಿಂದ ಶಬ್ದ ಕೇಳಿಸಿತ್ತು ಎಂದು ನಿವಾಸಿಗಳು ಹೇಳಿದ್ದಾರೆ.

ಪಾಕಿಸ್ತಾನದ ನೈಋತ್ಯ ನಗರವಾದ ಕ್ವೆಟ್ಟಾದಲ್ಲಿರುವ  ಭದ್ರತಾ ಪಡೆಗಳ ಪ್ರಧಾನ ಕಚೇರಿಯ ಹೊರಗೆ ಘಟನೆ ಜರುಗಿದೆ. ಫ್ರಾಂಟಿಯರ್ ಕಾನ್ಸ್ಟ್ಯಾಬ್ಯುಲರಿಯ ಮುಂದೆ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ ಮತ್ತು ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಕಳುಹಿಸಿವೆ. 

ಕಾರಿನಲ್ಲಿ ಬಾಂಬ್ ಇರಿಸಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ದಾಳಿಕೋರರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಯಾವುದೇ ಉಗ್ರರ ಗುಂಪು ತಕ್ಷಣಕ್ಕೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ, ಆದಾಗ್ಯೂ ಕ್ವೆಟ್ಟಾ ಪ್ರಾಂತೀಯ ರಾಜಧಾನಿಯಾಗಿರುವ ಬಲೂಚಿಸ್ತಾನದಲ್ಲಿ ನಾಗರಿಕರು ಮತ್ತು ಭದ್ರತಾ ಪಡೆಗಳನ್ನು ಹೆಚ್ಚಾಗಿ ಗುರಿಯಾಗಿಸಿಕೊಳ್ಳುವ ಪ್ರತ್ಯೇಕತಾವಾದಿ ಗುಂಪುಗಳ ಮೇಲೆ ಅನುಮಾನ ಮೂಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow