ಟ್ರಾಫಿಕ್ʼಗೆ ತೆರಿಗೆ ಅಸ್ತ್ರ: ಪೀಕ್ ಅವರ್ʼನಲ್ಲಿ ಒಬ್ಬರೇ ಕಾರ್ʼನಲ್ಲಿ ಸಂಚರಿಸಿದ್ರೆ ದಂಡನಾ..!?
ಬೆಂಗಳೂರು: ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಹೊಸ ನಿಯಮ ಜಾರಿಯಾಗುವ ಸಾಧ್ಯತೆ ಇದೆ. ಬೆಂಗಳೂರಿನ ಪ್ರಮುಖ ದಟ್ಟಣೆ ಪ್ರದೇಶಗಳಲ್ಲಿ ಸಿಂಗಲ್ ಪ್ಯಾಸೆಂಜರ್ ಕಾರ್ ಓಡಿಸಿದರೆ ಸಂಚಾರ ದಟ್ಟಣೆ ತೆರಿಗೆ (Congestion Tax) ವಿಧಿಸುವ ಪ್ರಸ್ತಾಪವನ್ನು ಸರ್ಕಾರ ಪರಿಗಣಿಸಿದೆ.
ಸೆಪ್ಟೆಂಬರ್ 24ರಂದು ಸಂಚಾರ ದಟ್ಟಣೆ, ಗುಂಡಿ ಸಮಸ್ಯೆ ಪರಿಹಾರ ಕುರಿತಂತೆ ವಿವಿಧ ಇಲಾಖೆಗಳು ಮತ್ತು ಕೆಲ ಉದ್ಯಮಿಗಳ ಸಮಾಲೋಚನಾ ಸಭೆ ನಡೆದಿತ್ತು. ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ತಜ್ಞರು “ಫಾಸ್ಟ್ ಟ್ಯಾಗ್ ಸಿಸ್ಟಂ” ಮೂಲಕ ನಿರ್ದಿಷ್ಟ ರಸ್ತೆಗಳಲ್ಲಿ ತೆರಿಗೆ ವಿಧಿಸುವ ಸಲಹೆ ನೀಡಿದ್ದಾರೆ.
ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ನಡೆದ ತಜ್ಞರ ಸಮಿತಿ ಈ ಪ್ರಸ್ತಾಪಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ನೀಡಿಲ್ಲ. ಸಂಚಾರ ದಟ್ಟಣೆ ಟ್ಯಾಕ್ಸ್ ಹಾಕಿರೆ ಸಾರ್ವಜನಿಕವಾಗಿ ವ್ಯಾಪಕವಾಗಿ ಆಕ್ರೋಶ ಸಾಧ್ಯತೆ ಅರಿತು ಆ ಪ್ರಸ್ತಾಪ ರಿಜೆಕ್ಟ್ ಆಗಬಹುದು. ಹಾಗಾಗಿ ಸರ್ಕಾರ ಮಟ್ಟದಲ್ಲಿ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ.
ಲಂಡನ್, ಸಿಂಗಾಪುರ್, ನ್ಯೂಯಾರ್ಕ್ ನಗರಗಳಲ್ಲಿ ಸಂಚಾರಣ ದಟ್ಟಣೆ ಟ್ಯಾಕ್ಸ್ ಬಗ್ಗೆ ಉಲ್ಲೇಖಿಸಲಾಗಿದ್ದು, ಬೆಂಗಳೂರು ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಅಲ್ಲಿಗೆ ಹೋಲಿಸಿ ಟ್ಯಾಕ್ಸ್ ಹಾಕುವ ಪ್ರಸ್ತಾಪಕ್ಕೆ ಬಿಜೆಪಿ ತೀವ್ರವಾಗಿ ವಿರೋಧಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?