Rashmika Mandanna: ನಟಿ ರಶ್ಮಿಕಾ ಮಂದಣ್ಣ ತಲೆ ಬೋಳಿಸಿದ ಕುದ್ರೋಳಿ ಗಣೇಶ್‌..! ವಿಡಿಯೋ ವೈರಲ್‌

ಮಾರ್ಚ್ 5, 2025 - 17:59
 0  18
Rashmika Mandanna: ನಟಿ ರಶ್ಮಿಕಾ ಮಂದಣ್ಣ ತಲೆ ಬೋಳಿಸಿದ ಕುದ್ರೋಳಿ ಗಣೇಶ್‌..! ವಿಡಿಯೋ ವೈರಲ್‌

ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಮುಟ್ಟಿಗೆದ್ದಲ್ಲ ಚಿನ್ನವಾಗುತ್ತಿದೆ. ರಶ್ಮಿಕಾ ಮಂದಣ್ಣ ನಟಿಸಿ, ಬಿಡುಗಡೆ ಆಗಿರುವ ಕಳೆದ ಮೂರು ಸಿನಿಮಾಗಳು ಸಹ ಬ್ಲಾಕ್ ಬಸ್ಟರ್ ಆಗಿವೆ. ಮೊದಲಿಗೆ ಬಿಡುಗಡೆ ಆದ ‘ಅನಿಮಲ್’ ಸುಮಾರು 1000 ಕೋಟಿ ಗಳಿಕೆ ಮಾಡಿತು. ಅದರ ಬಳಿಕ ಬಿಡುಗಡೆ ಆದ ‘ಪುಷ್ಪ 2’ ಸಿನಿಮಾ ಸುಮಾರು 2000 ಕೋಟಿ ರೂಪಾಯಿ ಗಳಿಕೆ ಮಾಡಿತು. ಇತ್ತೀಚೆಗೆ ಬಿಡುಗಡೆ ಆದ ‘ಛಾವಾ’ ಸಿನಿಮಾ ಸಹ 1000 ಕೋಟಿ ಗಳಿಕೆಯತ್ತ ವೇಗದಿಂದ ಮುನ್ನುಗ್ಗುತ್ತಿದೆ.

ಇದರ ನಡುವೆ ಮ್ಯಾಜಿಕ್‌ ಶೋ ಒಂದರಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದ ಫೋಟೋದಲ್ಲಿನ ಕೂದಲನ್ನೇ ಮಾಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಮ್ಯಾಜಿಕ್‌ ಶೋನಲ್ಲಿ ನಡೆದ ಈ ಕಾಮಿಡಿಯನ್ನು ನೋಡಿ ನೋಡುಗರು ಈ ಮ್ಯಾಜಿಕ್‌ ಅಂತೂ ತುಂಬಾ ಮಜವಾಗಿದೆ ಎಂದು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಹೌದು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಇದೀಗ ಅಂತಹದ್ದೊಂದು ವಿಡಿಯೋ ಹರಿದಾಡುತ್ತಿದ್ದು, ಮ್ಯಾಜಿಕ್‌ ಶೋ ಒಂದರಲ್ಲಿ ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್‌ ರಶ್ಮಿಕಾ ಮಂದಣ್ಣ ತಲೆಯನ್ನೇ ಬೋಳಿಸಿದ್ದಾರೆ. ಮ್ಯಾಜಿಕ್‌ ಶೋನಲ್ಲಿ ನಡೆದ ಈ ಕಾಮಿಡಿಯನ್ನು ನೋಡಿ ನೋಡುಗರಂತೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow