RCB ಅನ್​ಬಾಕ್ಸ್ ಈವೆಂಟ್ ಗೆ ಫ್ಯಾನ್ಸ್ ಕಾತುರ: ಎಲ್ಲಾ ಟಿಕೆಟ್​ ಸೋಲ್ಡ್ ಔಟ್!

ಮಾರ್ಚ್ 7, 2025 - 22:01
 0  8
RCB ಅನ್​ಬಾಕ್ಸ್ ಈವೆಂಟ್ ಗೆ ಫ್ಯಾನ್ಸ್ ಕಾತುರ: ಎಲ್ಲಾ ಟಿಕೆಟ್​ ಸೋಲ್ಡ್ ಔಟ್!

RCB ಅನ್​ಬಾಕ್ಸ್ ಈವೆಂಟ್ ಗೆ ಫ್ಯಾನ್ಸ್ ಕಾತುರರಾಗಿದ್ದು, ಎಲ್ಲಾ ಟಿಕೆಟ್​ ಸೋಲ್ಡ್ ಔಟ್ ಆಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅನ್‌ಬಾಕ್ಸ್ 2025 ಕಾರ್ಯಕ್ರಮ ಮಾರ್ಚ್ 17 ರಂದು  ನಡೆಯಲಿದೆ. 

ಈ ಕಾರ್ಯಕ್ರಮದ ಟಿಕೆಟ್‌ಗಳು ಒಂದು ಗಂಟೆಯೊಳಗೆ ಮಾರಾಟವಾಗಿವೆ.ಈ ವರ್ಷದ ಈವೆಂಟ್ ಹಿಂದೆಂದಿಗಿಂತಲೂ ಭಿನ್ನವಾಗಿರಲಿದ್ದು, ತಂಡಕ್ಕೆ ನೂತನವಾಗಿ ಆಯ್ಕೆಯಾಗಿರುವ ನಾಯಕ ರಜತ್ ಪಾಟಿದರ್ ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿರಲಿದ್ದಾರೆ. 

ಕಾರ್ಯಕ್ರಮಕ್ಕೆ ಶುಕ್ರವಾರ ಟಿಕೆಟ್ ಮಾರಾಟವನ್ನು ಆರಂಭಿಸಲಾಗಿದ್ದು, ಟಿಕೆಟ್ ಮಾರಾಟ ಆರಂಭವಾದ ಒಂದು ಗಂಟೆಯೊಳಗೆ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಕಳೆದ ಬಾರಿ ನಡೆದಿದ್ದ ಅನ್​ಬಾಕ್ಸ್ ಈವೆಂಟ್​ಗೂ ಇಡೀ ಕ್ರೀಡಾಂಗಣವೇ ತುಂಬಿತ್ತು. ಈ ಬಾರಿಯೂ ಅದೇ ನಿರೀಕ್ಷೆ ಇಡಲಾಗಿತ್ತು. ಅದರಂತೆ ಟಿಕೆಟ್ ಮಾರಾಟ ಆರಂಭವಾದ 60 ನಿಮಿಷಗಳಲ್ಲೇ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.

ತಂಡಕ್ಕೆ ನೂತನವಾಗಿ ಆಯ್ಕೆಯಾಗಿರುವ ನಾಯಕ ರಜತ್ ಪಾಟಿದರ್ ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿರಲಿದ್ದಾರೆ. ಇವರೊಂದಿಗೆ ತಂಡದ ಇನ್ನು ಕೆಲವು ಸ್ಟಾರ್ ಆಟಗಾರರು ಈ ಈವೆಂಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಇದೇ ಕಾರ್ಯಕ್ರಮದಲ್ಲಿ ಆರ್​ಸಿಬಿ ಪರ ಸರ್ವ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಲಿದ್ದಾನೆ. ಇದುವರೆಗೆ ಈ ಗೌರವಕ್ಕೆ ಮೂವರು ದಿಗ್ಗಜ ಆಟಗಾರರಾದ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್​ ಹಾಗೂ ಕನ್ನಡಿಗ ಆರ್​ ವಿನಯ್​ಕುಮಾರ್ ಭಾಜನರಾಗಿದ್ದರು. ಈ ಬಾರಿ ಯಾರಿಗೆ ಆ ಗೌರವ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow