RCB ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್: ಗಾಯದಿಂದ ಚೇತರಿಸಿಕೊಂಡ ವಿಧ್ವಂಸಕ ಬ್ಯಾಟರ್!

IPL 2025ರ ಆರಂಭಕ್ಕೆ ಇನ್ನೇನೂ ಕೆಲವೇ ದಿನ ಬಾಕಿ ಇದ್ದು, ಕ್ರಿಕೆಟ್ ಅಭಿಮಾನಿಗಳು ಕಾತುರರಾಗಿದ್ದಾರೆ. ಈ ಮಧ್ಯೆಯೇ RCBಗೆ ಗುಡ್ ನ್ಯೂಸ್ ಸಿಕ್ಕಿದ್ದು, ಐಪಿಎಲ್ನಿಂದ ಹೊರಗುಳಿಯುವ ನಿರೀಕ್ಷೆಯಿದ್ದ ಇಂಗ್ಲೆಂಡ್ ಆಟಗಾರ ಜಾಕೋಬ್ ಬೆಥೆಲ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ
ಮೊದಲ ಪಂದ್ಯದಿಂದಲೇ ಬೆಥೆಲ್ ಲಭ್ಯವಿರುತ್ತದೆ ಎಂದು ವರದಿಯಾಗಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ವಿರುದ್ಧದ ಸೀಮಿತ ಓವರ್ಗಳ ಸರಣಿಯ ಸಮಯದಲ್ಲಿ ಬೆಥೆಲ್ ಗಾಯಗೊಂಡಿದ್ದರು . ಇದೇ ಕಾರಣದಿಂದ ಅವರು ಇಡೀ ಟೂರ್ನಿಯಿಂದ ಹೊರಬಿದ್ದಿದ್ದರು. ಅವರ ಬದಲಿಗೆ ಜೇಮೀ ಸ್ಮಿತ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು.
ಬೆಥೆಲ್ ಚಿಕ್ಕ ವಯಸ್ಸಿನಲ್ಲಿಯೇ ಅತ್ಯುತ್ತಮ ಸ್ಟ್ರೋಕ್ ಆಟಗಾರನಾಗಿ ಗುರುತಿಸಿಕೊಂಡಿದ್ದು, ಅವರನ್ನು ಕಳೆದ ವರ್ಷದ ಮೆಗಾ ಹರಾಜಿನಲ್ಲಿ ಆರ್ಸಿಬಿ 2.6 ಕೋಟಿ ರೂ.ಗೆ ಖರೀದಿಸಿದೆ. ಬೆಥೆಲ್ ಮಧ್ಯಮ ಕ್ರಮಾಂಕದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಬಲ್ಲರು, ಜೊತೆಗೆ ಉಪಯುಕ್ತ ಎಡಗೈ ಸ್ಪಿನ್ ಬೌಲಿಂಗ್ ಮಾಡುತ್ತಾರೆ. ಬೆಥೆಲ್ ಇದುವರೆಗೆ 63 ಟಿ20 ಪಂದ್ಯಗಳನ್ನು ಆಡಿದ್ದು, 136.77 ಸ್ಟ್ರೈಕ್ ರೇಟ್ನಲ್ಲಿ 1127 ರನ್ ಗಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






