Recruitment 2025: ರೈಲ್ವೆಯಲ್ಲಿ 8875 ಹುದ್ದೆಗಳಿಗೆ ನೇಮಕಾತಿ: ಪಿಯುಸಿ ಪಾಸಾಗಿದ್ರೆ ಕೂಡಲೇ ಅರ್ಜಿ ಸಲ್ಲಿಸಿ
ನವದೆಹಲಿ: ರೈಲ್ವೆ ನೇಮಕಾತಿ ಮಂಡಳಿ (RRB) ತಾಂತ್ರಿಕೇತರ ವರ್ಗ (NTPC) ಅಡಿಯಲ್ಲಿ 8,875 ಹುದ್ದೆಗಳಿಗೆ ನೇಮಕಾತಿಗೆ ಅನುಮೋದನೆ ನೀಡಿದೆ. ಈ ಹುದ್ದೆಗಳು ಸ್ಟೇಷನ್ ಮಾಸ್ಟರ್, ಗೂಡ್ಸ್ ಗಾರ್ಡ್, ಕಮರ್ಷಿಯಲ್ ಕ್ಲರ್ಕ್, ಅಕೌಂಟ್ಸ್ ಕ್ಲರ್ಕ್, ಜೂನಿಯರ್ ಟೈಪಿಸ್ಟ್, ಟ್ರೈನ್ಸ್ ಕ್ಲರ್ಕ್, ಸೀನಿಯರ್ ಕ್ಲರ್ಕ್-ಕಮ್-ಟೈಪಿಸ್ಟ್, ಟ್ರಾಫಿಕ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಒಳಗೊಂಡಿವೆ.
ಹುದ್ದೆಗಳಲ್ಲೇ ಹೆಚ್ಚು: ಗೂಡ್ಸ್ ಟ್ರೈನ್ ಮ್ಯಾನೇಜರ್ (3,423), ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್-ಕಮ್-ಟೈಪಿಸ್ಟ್ (921), ಸ್ಟೇಷನ್ ಮಾಸ್ಟರ್ (615). ಇತರ ಹುದ್ದೆಗಳಲ್ಲೂ ವಿವಿಧ ಪ್ರಮಾಣದಲ್ಲಿ ಹುದ್ದೆಗಳು ಲಭ್ಯವಿವೆ.
ಅರ್ಹತೆ: ಪದವೀಧರರಿಗೆ 5,817 ಹುದ್ದೆಗಳು ಮೀಸಲಾಗಿದ್ದು, 12ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ 3,058 ಹುದ್ದೆಗಳು ಲಭ್ಯ. ವಯೋಮಿತಿಯು ಸರಕಾರದ ನಿಯಮಗಳ ಪ್ರಕಾರ ಮತ್ತು ಮೀಸಲು ವರ್ಗಗಳಿಗೆ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಆಯ್ಕೆ CBT 1, CBT 2, ಕೌಶಲ್ಯ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ನಡೆಯಲಿದೆ. CBT 1 ಪರೀಕ್ಷೆ 100 ಪ್ರಶ್ನೆಗಳೊಂದಿಗೆ 90 ನಿಮಿಷಗಳ ಅವಧಿಯಲ್ಲಿ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಕೆ: ಅರ್ಜಿಗಳನ್ನು ಪ್ರಾದೇಶಿಕ RRB ವೆಬ್ಸೈಟ್ಗಳ ಮೂಲಕ ಆನ್ಲೈನ್ನಲ್ಲಿ ಸಲ್ಲಿಸಬಹುದು. RRB ಶೀಘ್ರದಲ್ಲೇ ವಿವರವಾದ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಿದೆ. ಈ ನೇಮಕಾತಿ ಪ್ರಕ್ರಿಯೆ ಮೂಲಕ ರೈಲ್ವೆ ವಲಯಗಳಲ್ಲಿ ಸಾವಿರಾರು ಹುದ್ದೆಗಳಿಗೆ ಅವಕಾಶ ಲಭ್ಯವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?