Renukaswamy Case: ಆರೋಪಿ ಪವಿತ್ರಾ ಗೌಡಗೆ ಮತ್ತೆ ಶಾಕ್: ಜಾಮೀನು ಅರ್ಜಿ ವಜಾ!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲಿನಲ್ಲಿರುವ ಎ1 ಆರೋಪಿ ಪವಿತ್ರಾ ಗೌಡಗೆ ದೊಡ್ಡ ಬಿಗ್ ಶಾಕ್ ಆಗಿದೆ. 57ನೇ ಸೆಷನ್ಸ್ ಕೋರ್ಟ್ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
“ನನ್ನಿಂದ ರೇಣುಕಾಸ್ವಾಮಿ ಸಾವಿಗೀಡಾಗಿಲ್ಲ, ನಾನು ಮಹಿಳೆ ಮತ್ತು ಸಿಂಗಲ್ ಮದರ್. ಮಗಳ ಆರೈಕೆಗೆ ನಾನು ಹೊರಗಿರಬೇಕು” ಎಂದು ಕಾರಣಗಳನ್ನು ಮಂಡಿಸಿದ್ದರು. ಆದರೆ, ನ್ಯಾಯಾಲಯ ಯಾವುದೇ ಕಾರಣವನ್ನು ಪರಿಗಣಿಸದೆ ಅರ್ಜಿಯನ್ನು ತಿರಸ್ಕರಿಸಿದೆ.
ಈ ವಿಚಾರಣೆ 57ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಐ.ಪಿ. ನಾಯಕ್ ಅವರ ಮುಂದೆ ನಡೆಯಿತು. ವಿಚಾರಣೆ ಬಳಿಕ ನ್ಯಾಯಾಧೀಶರು ಪವಿತ್ರಾ ಗೌಡ ಅವರ ಅರ್ಜಿಯನ್ನು ವಜಾಗೊಳಿಸಿದರು. ಇದೀಗ ಪವಿತ್ರಾ ಗೌಡ ಅವರು ಹೈಕೋರ್ಟ್ನಲ್ಲಿ ಜಾಮೀನುಗಾಗಿ ಮುಂದಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?