S M Krishna: ಎಸ್ ಎಂ ಕೃಷ್ಣ ಅವರ ಮದುವೆಯ ಆಮಂತ್ರಣ ಪತ್ರಿಕೆ ವೈರಲ್!

ಡಿಸೆಂಬರ್ 11, 2024 - 12:01
 0  149
S M Krishna: ಎಸ್ ಎಂ ಕೃಷ್ಣ ಅವರ ಮದುವೆಯ ಆಮಂತ್ರಣ ಪತ್ರಿಕೆ ವೈರಲ್!

ಬೆಂಗಳೂರು: ನಾಡು ಕಂಡ ಅಪ್ರತಿಮ ನಾಯಕ, ಸಜ್ಜನ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ನಮ್ಮನ್ನಗಲಿದ್ದಾರೆ. ನಾಡಿನಾದ್ಯಂತ ಎಸ್‌.ಎಂ ಕೃಷ್ಣ ಅಗಲಿಕೆಗೆ ಸಂತಾಪ ಸೂಚಿಸಲಾಗುತ್ತಿದೆ. ಅಪಾರ ಅಭಿಮಾನಿಗಳು, ಕುಟುಂಬಸ್ಥರು, ರಾಜಕೀಯ ಮುಖಂಡರು ಎಸ್‌.ಎಂ ಕೃಷ್ಣ ಅಂತಿಮ ದರ್ಶನ ಪಡೆದು ಭಾವಪೂರ್ಣ ನಮನ ಸಲ್ಲಿಸುತ್ತಿದ್ದಾರೆ. 

ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಅವರ ಮದುವೆಯ ಲಗ್ನಪತ್ರಿಕೆ ವೈರಲ್ ಆಗುತ್ತಿದೆ. ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಅವರು 29 ಏಪ್ರಿಲ್​ 1966ರಲ್ಲಿ ಶಿವಮೊಗ್ಗದ ಕುಡು ಮಲ್ಲಿಗೆ ಗ್ರಾಮದ ಪ್ರೇಮರನ್ನು ವಿವಾಹವಾಗಿದ್ದು. ಶಿವಮೊಗ್ಗದ ನ್ಯಾಷನಲ್​ ಹೈಸ್ಕೂಲ್​ನಲ್ಲಿ ವಿವಾಹವಾದ ಬಗ್ಗೆ ಈ ವಿವಾಹ ಪತ್ರಿಕೆಯಲ್ಲಿ ನಮೂದಿಸಿದ್ದನ್ನು ಕಾಣಬಹುದಾಗಿದೆ.

ಏಪ್ರಿಲ್​ 29ರ ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯ ಶುಭ ಮೂಹರ್ತದಲ್ಲಿ ವಿವಾಹವಾದ ಬಗ್ಗೆ ಈ ಪತ್ರಿಕೆಯಲ್ಲಿ ವಿವರವಿದ್ದು. ಅದೇ ದಿನ ಸಂಜೆ 6 ರಿಂದ 8 ಗಂಟೆಗೆ ಅವರ ಆರತಕ್ಷತೆ ನಡೆದಿದೆ ಎಂದು ಇದರಲ್ಲಿ ನಮೂದಿಸಲಾಗಿದೆ. ಸದ್ಯ  ಎಸ್ಎಂ ಕೃಷ್ಣ ಅವರ ವಿವಾಹದ ಆಮಂತ್ರಣ ಪತ್ರಿಕೆ ಈಗ ವೈರಲ್ ಆಗುತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow