Shridhar Nayak: "ಪಾರು" ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ ನಿಧನ!

ಮೇ 27, 2025 - 12:11
 0  9
Shridhar Nayak: "ಪಾರು" ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ ನಿಧನ!

ಪಾರು, ವಧು ಸೀರಿಯಲ್‌ನಲ್ಲಿ ನಟಿಸಿದ್ದ ನಟ ಶ್ರೀಧರ್ ನಾಯಕ್ ನಿಧನ ಹೊಂದಿದ್ದಾರೆ.ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ್ ನಾಯಕ್ ಅವರಿಗೆ ಇತ್ತೀಚೆಗೆ ತೀವ್ರ ಅನಾರೋಗ್ಯ ಕಾಡಿತ್ತು. ಶ್ರೀಧರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರು ಎಳೆದಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರ ಮೃತ ಶರೀರವನ್ನು ಇಡಲಾಗಿದೆ.

47 ವರ್ಷ ವಯಸ್ಸಿನ ನಟ ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ಸದ್ಯ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. 1978ರಲ್ಲಿ ಜನಿಸಿದ ಶ್ರೀಧರ್ ಅವರು ‘ಪಾರು’ ಧಾರಾವಾಹಿಯಲ್ಲಿ ಆದಿಯ ಚಿಕ್ಕಪ್ಪನ ಪಾತ್ರವನ್ನು ಶ್ರೀಧರ್ ಮಾಡಿದ್ದರು. ಅಷ್ಟೇ ಅಲ್ಲದೇ ಮಂಗಳ ಗೌರಿ ಸೇರಿದಂತೆ 40ಕ್ಕೂ ಅಧಿಕ ಸೀರಿಯಲ್​ನಲ್ಲಿ ಅಭಿನಯಿಸಿದ್ದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow