SSLC, PUC ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್: ಪಾಸಿಂಗ್ ಮಾರ್ಕ್ಸ್ 35 ರಿಂದ 33%ಕ್ಕೆ ಇಳಿಕೆ!

ಅಕ್ಟೋಬರ್ 15, 2025 - 14:01
 0  11
SSLC, PUC ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್: ಪಾಸಿಂಗ್ ಮಾರ್ಕ್ಸ್ 35 ರಿಂದ 33%ಕ್ಕೆ ಇಳಿಕೆ!

ಬೆಂಗಳೂರು: ರಾಜ್ಯ ಸರ್ಕಾರ ಎಸ್​ಎಸ್​ಎಲ್​ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​ ಕೊಟ್ಟಿದೆ. 2025-26ನೇ ಸಾಲಿನಿಂದ ಪರೀಕ್ಷಾ ಪಾಸಿಂಗ್ ಅಂಕ ಕಡಿತ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,   ಹೊಸ ನಿಯಮದ ಪ್ರಕಾರ ಲಿಖಿತ ಹಾಗೂ ಆಂತರಿಕ ಅಂಕ ಸೇರಿ ಪಿಯುಸಿಯಲ್ಲಿ ಪ್ರತಿ ವಿಷಯದಲ್ಲೂ ಕನಿಷ್ಠ 30 ಅಂಕ ಕಡ್ಡಾಯವಾಗಿರಲಿದೆ. SSLC ಪರೀಕ್ಷೆಯಲ್ಲಿ ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 30 ಅಂಕ ಪಡೆದರೆ ವಿದ್ಯಾರ್ಥಿಗಳು ತೇರ್ಗಡ ಆಗಲಿದ್ದಾರೆ. ಅದಲ್ಲದೆ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 198 ಅಂಕ ಮತ್ತು SSLCಯಲ್ಲಿ 625ಕ್ಕೆ ಕನಿಷ್ಠ 206 ಅಂಕ ಗಳಿಸಿದರೆ ವಿದ್ಯಾರ್ಥಿಗಳು ಇನ್ನು ತೇರ್ಗಡೆ ಆಗಲಿದ್ದಾರೆ

ಪಾಸಿಂಗ್ ಮಾರ್ಕ್ಸ್ ಕಡಿತ ವಿಚಾರವಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಆ ಪೈಕಿ ಶೇಕಡಾ 33ರಷ್ಟು ಪರವಾಗಿ 701 ಪತ್ರ ಮತ್ತು ಶೇ.35ರಷ್ಟು ಪರವಾಗಿ 8 ಪತ್ರಗಳು ಬಂದಿದ್ದವು. ಹೀಗಾಗಿ 2025-26ನೇ ಸಾಲಿನಿಂದ SSLCಯಲ್ಲಿ ಪ್ರಥಮ ಭಾಷೆ ಹೊರತುಪಡಿಸಿ ಶೇ. 33 ಫಲಿತಾಂಶ ಬಂದರೆ ವಿದ್ಯಾರ್ಥಿಗಳು ಪಾಸ್​ ಆಗಲಿದ್ದಾರೆ. ಪ್ರಥಮ ಭಾಷೆ ಗರಿಷ್ಠ ಅಂಕವನ್ನು 125ರಿಂದ 100ಕ್ಕೆ ಇಳಿಸುವ ವಿಚಾರದ ಬಗ್ಗೆಯೂ ಚರ್ಚೆಯಾಗಿದ್ದು, ಇದು ಇನ್ನೂ ಅಂತಿಮವಾಗಿಲ್ಲ. ಸಾರ್ವಜನಿಕರ ಅಭಿಪ್ರಾಯ ಪಡೆದೇ ಈ ಬಗ್ಗೆ ತೀರ್ಮಾನಿಸಲಾಗುತ್ತೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ (SSLC): ಪ್ರಸ್ತುತ 625 ಅಂಕಗಳಿಗೆ ಕನಿಷ್ಟ ಶೇ. 35ರಷ್ಟು (219 ಅಂಕಗಳು) ಗಳಿಸುವುದು ಕಡ್ಡಾಯವಿತ್ತು. ಹೊಸ ನಿಯಮದ ಪ್ರಕಾರ, 625 ಅಂಕಗಳಿಗೆ ಕನಿಷ್ಟ 206 ಅಂಕ (ಶೇ. 33) ಗಳಿಸಿದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಪ್ರತಿ ವಿಷಯದಲ್ಲಿ ಕಡ್ಡಾಯವಾಗಿ ಕನಿಷ್ಠ 30 ಅಂಕ ಪಡೆಯಲೇಬೇಕು.

ದ್ವಿತೀಯ ಪಿಯುಸಿ (II PUC): 600 ಅಂಕಗಳಿಗೆ ಕನಿಷ್ಟ ಶೇ. 35ರಷ್ಟು (210 ಅಂಕಗಳು) ಪಡೆಯಬೇಕಿತ್ತು. ಹೊಸ ನಿಯಮದಂತೆ, 600 ಅಂಕಗಳಿಗೆ ಕನಿಷ್ಟ 198 ಅಂಕ (ಶೇ. 33) ಪಡೆದರೆ ಪಾಸ್ ಆಗುತ್ತಾರೆ. ಪ್ರತಿ ವಿಷಯದಲ್ಲಿ ಲಿಖಿತ ಮತ್ತು ಆಂತರಿಕ ಅಂಕ ಸೇರಿ 30 ಅಂಕ ಬರುವುದು ಕಡ್ಡಾಯ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow