Tamannaah Bhatia And Vijay Varma: ತಮನ್ನಾ-ವಿಜಯ್ ಬ್ರೇಕಪ್: ಜೊತೆಗಿದ್ದ ಎಲ್ಲಾ ಫೋಟೋಗಳು ಡಿಲೀಟ್

ಮಾರ್ಚ್ 5, 2025 - 12:02
 0  11
Tamannaah Bhatia And Vijay Varma: ತಮನ್ನಾ-ವಿಜಯ್ ಬ್ರೇಕಪ್: ಜೊತೆಗಿದ್ದ ಎಲ್ಲಾ ಫೋಟೋಗಳು ಡಿಲೀಟ್

ಟಾಲಿವುಡ್‌ನ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ನಟ ವಿಜಯ್ ವರ್ಮಾ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಅವರು ತಮ್ಮ ಸಂಬಂಧವನ್ನು ಅಧಿಕೃತವಾಗಿ ಎಂದಿಗೂ ಘೋಷಿಸದಿದ್ದರೂ, ಪಾರ್ಟಿಗಳು, ಸಮಾರಂಭಗಳು ಮತ್ತು ರಜಾದಿನಗಳಲ್ಲಿ ಅವರನ್ನು ಜೋಡಿಯಾಗಿ ಕಾಣಲಾಗುತ್ತಿತ್ತು. ಆದರೆ, ಈ ಪ್ರೇಮ ಸಂಬಂಧ ಈಗ ಮುರಿದು ಬಿದ್ದಿದೆ ಎಂದು ವರದಿಯಾಗಿದೆ.

ಹೌದು  ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಈ ಜೋಡಿ ತಮ್ಮ ಸಂಬಂಧ ಕೊನೆಗೊಳಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಈ ಹೊತ್ತಲ್ಲೇ ಫ್ಯಾನ್ಸ್​ಗೆ ತಮನ್ನಾ, ವಿಜಯ್​ ವರ್ಮಾ ಶಾಕಿಂಗ್​ ನ್ಯೂಸ್​​ ಕೊಟ್ಟಿದ್ದಾರೆ.

ಲಸ್ಟ್ ಸ್ಟೋರೀಸ್ 2.. 2023ರಲ್ಲಿ ತೆರೆಕಂಡ ಸಿನಿಮಾ. ಈ ಚಿತ್ರದಲ್ಲೇ ತಮನ್ನಾ-ವಿಜಯ್ ಲವ್​ ಟ್ರ್ಯಾಕ್​ ಶುರುವಾಗಿತ್ತು. ಮೊದಲಿಗೆ ಈ ವಿಚಾರವನ್ನ ತಳ್ಳಿ ಹಾಕಿದ್ದ ಜೋಡಿ, ಮೆಲ್ಲ ಮೆಲ್ಲನೇ ಒಪ್ಪಿಕೊಂಡಿತ್ತು. ಅವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ಜನರು ಮದುವೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಎರಡು ವರ್ಷ ಪೂರ್ಣಗೊಳ್ಳುವ ಮುಂಚೆನೇ ಬೇರ್ಪಡುವಿಕೆಯ ಸುದ್ದಿ ಅಬ್ಬಿದೆ. ಇದಕ್ಕೆ ಸಾಕ್ಷಿ ಇನ್‌ಸ್ಟಾಗ್ರಾಮ್.

ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಅವರು ಈಗಾಗಲೇ ಬ್ರೇಕಪ್ ಮಾಡಿಕೊಂಡು ಹಲವು ವಾರಗಳು ಕಳೆದಿವೆ ಎಂದು ಹೇಳಲಾಗುತ್ತಿದೆ. ಈ ರೀತಿ ಆಗುತ್ತದೆ ಎಂದು ಅವರ ಫ್ಯಾನ್ಸ್ ಊಹಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಅವರು ಬ್ರೇಕಪ್​ ಬಗ್ಗೆ ಬಾಯಿ ಬಿಡಬಹುದು ಎಂಬ ನಿರೀಕ್ಷೆ ಇದೆ.

ಚಿತ್ರರಂಗದಲ್ಲಿ ತಮನ್ನಾ ಮತ್ತು ವಿಜಯ್ ವರ್ಮಾ ಅವರು ಬೇಡಿಕೆ ಹೊಂದಿದ್ದಾರೆ. ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರು ಬ್ರೇಕಪ್ ಮಾಡಿಕೊಂಡಿದ್ದರೂ ಕೂಡ ಪರಸ್ಪರ ಸ್ನೇಹಿತರಾಗಿ ಮುಂದುವರಿಯಲಿದ್ದಾರೆ. ವೃತ್ತಿ ಜೀವನದಲ್ಲಿ ಒಬ್ಬರಿಗೊಬ್ಬರು ಗೌರವ ನೀಡಲಿದ್ದಾರೆ ಎಂದು ಆಪ್ತ ಮೂಲಗಳು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow