Tesla Car Showroom: ಭಾರತದಲ್ಲಿ ಮೊದಲ ಟೆಸ್ಲಾ ಶೋರೂಂ! ಯಾವಾಗ ಓಪನ್..?

ಜುಲೈ 12, 2025 - 08:07
 0  9
Tesla Car Showroom: ಭಾರತದಲ್ಲಿ ಮೊದಲ ಟೆಸ್ಲಾ ಶೋರೂಂ! ಯಾವಾಗ ಓಪನ್..?

ದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಟೆಸ್ಲಾ ಈಗಾಗಲೇ ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ಮುಂಬೈ, ದೆಹಲಿಯಂಥ ಮೆಟ್ರೋ ನಗರಗಳಲ್ಲಿ ಮೊದಲ ಶೋರೂಂಗಳನ್ನು ಸ್ಥಾಪಿಸುವ ಯೋಜನೆ ಜಾರಿಯಲ್ಲಿದೆ.  ಇತ್ತೀಚೆಗೆ ಟೆಸ್ಲಾ ತನ್ನ ಮೊದಲ ಅಧಿಕೃತ ಶೋರೂಂ ಅನ್ನು ಮುಂಬೈನಲ್ಲಿ ತೆರೆಯುವುದಾಗಿ ಘೋಷಿಸಿದೆ. ಭಾರತೀಯ ಗ್ರಾಹಕರು ಟೆಸ್ಲಾ ಕಾರುಗಳನ್ನು ನೋಡಲು ಮತ್ತು ಅನುಭವಿಸಲು ಇದು ಉತ್ತಮ ಅವಕಾಶವಾಗಲಿದೆ.

ಹೌದು ಜುಲೈ 15 ರಂದು ಮುಂಬೈನಲ್ಲಿ ತನ್ನ ಮೊದಲ ಶೋರೂಂ ತೆರೆಯಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮೂಲಕ ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ವಿಶ್ವದ ಮೂರನೇ ಅತಿದೊಡ್ಡ ಅಟೋಮೊಬೈಲ್ಮಾರುಕಟ್ಟೆಯಾದ ಭಾರತದಲ್ಲಿ ಅಧಿಕೃತ ಕಾರ್ಯಾಚರಣೆಯನ್ನು ಪ್ರಾರಂಭಿಸುವತ್ತ ಒಂದು ಹೆಜ್ಜೆ ಇಟ್ಟಿದೆ.

ಮಾರ್ಚ್ ಆರಂಭದಲ್ಲಿ, ಟೆಸ್ಲಾ ಮುಂಬೈನಲ್ಲಿ ತನ್ನ ಮೊದಲ ಶೋರೂಂ ಸ್ಥಳಕ್ಕಾಗಿ ಗುತ್ತಿಗೆ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿತ್ತು. ಯುರೋಪ್ ಮತ್ತು ಚೀನಾದಲ್ಲಿ ಟೆಸ್ಲಾ ಕಾರುಗಳ ಮಾರಾಟ ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ ಟೆಸ್ಲಾ ಭಾರತಕ್ಕೆ ಎಂಟ್ರಿಯಾಗುತ್ತಿದೆಕೆಲವು ತಿಂಗಳ ಹಿಂದೆ ಟೆಸ್ಲಾ ತನ್ನ ಭಾರತೀಯ ಕಾರ್ಯಾಚರಣೆಗಳಿಗಾಗಿ ತನ್ನ ನೇಮಕಾತಿ ಪ್ರಕ್ರಿಯೆ ಆರಂಭಿಸಿತ್ತು. ದೆಹಲಿ-ಎನ್ಸಿಆರ್ನಲ್ಲಿ ಮತ್ತೊಂದು ಶೋರೂಂ ತೆರೆಯುವ ನಿರೀಕ್ಷೆಯಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow