Virat Kohli: ಭಾರತ ಬಿಟ್ಟು ಲಂಡನ್ʼನಲ್ಲಿ ಶಾಶ್ವತವಾಗಿ ನೆಲೆಸಲು ನಿರ್ಧರಿಸಿದ್ರಾ ಕೊಹ್ಲಿ..!?

ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮಕ್ಕಳ ಜೊತೆ ಭಾರತ ಬಿಟ್ಟು ಲಂಡನ್ಗೆ ಶಿಫ್ಟ್ ಆಗಲಿದ್ದಾರಂತೆ. ವಿರಾಟ್ ಮತ್ತು ಅನುಷ್ಕಾ ಅವರು ಲಂಡನ್ ನಲ್ಲಿ ಆಸ್ತಿ ಖರೀದಿಸಿದ್ದಾರೆ. ಅಕಾಯ್ ಜನಿಸಿದ ಬಳಿಕ ಅನುಷ್ಕಾ ಶರ್ಮಾ ಹಲವು ತಿಂಗಳು ಕಾಲ ಲಂಡನ್ನಲ್ಲೇ ನೆಲೆಸಿದ್ರು. ಈ ಪವರ್ ಕಪಲ್ ಶೀಘ್ರದಲ್ಲೇ ಲಂಡನ್ ಗೆ ತೆರಳಲಿದ್ದಾರೆ ಎಂದು ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮಾ ಖಚಿತಪಡಿಸಿದ್ದಾರೆ. ಆದ್ರೆ ಶರ್ಮಾ ಹೆಚ್ಚಿನ ವಿವರ ತಿಳಿಸಿಲ್ಲ.
ಇನ್ನೂ ಇದರ ನಡುವೆ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ ಡಾಕ್ಟರ್ ಶ್ರೀರಾಮ್. ಅನುಷ್ಕಾ ಶರ್ಮಾ ಜೊತೆಗೆ ತಾವು ಆಡಿದ ಮಾತುಗಳನ್ನು ಶ್ರೀರಾಮ್ ಅವರು ನೆನಪಿಸಿಕೊಂಡಿದ್ದಾರೆ.
‘ನಾನು ನಿಮಗೆ ಒಂದು ವಿಚಾರ ಹೇಳಬೇಕು. ಅನುಷ್ಕಾ ಶರ್ಮಾ ಜೊತೆ ನಾನು ಚರ್ಚೆ ಮಾಡಿದ್ದೆ. ಅವರು ಲಂಡನ್ಗೆ ಹೋದರು. ಅವರ ಯಶಸ್ಸನ್ನು ಎಂಜಾಯ್ ಮಾಡಲು ಇಲ್ಲಿ ಸಾಧ್ಯವಿಲ್ಲ. ಅವರು ಏನೇ ಮಾಡಿದರೂ ಚರ್ಚೆ ಆಗುತ್ತದೆ’ ಎಂದಿದ್ದಾರೆ ಶ್ರೀರಾಮ್.
ಈ ನಿರ್ಧಾರ ತೆಗೆದುಕೊಳ್ಳುವುದರ ಹಿಂದೆ ಮಕ್ಕಳು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಅನುಷ್ಕಾ ಶರ್ಮಾ ಮಕ್ಕಳಾದ ವಮಿಕಾ ಹಾಗೂ ಅಕಾಯ್ ಬೆಳೆದು ದೊಡ್ಡವರಾಗುತ್ತಿದ್ದಾರೆ. ಅವರನ್ನು ಶಾಲೆಗೆ ಸೇರಿಸುವ ವರ್ಷಗಳು ಹತ್ತಿರ ಬರುತ್ತಿವೆ. ಭಾರತದಲ್ಲಿ ಅವರನ್ನು ಶಾಲೆಗೆ ಸೇರಿಸಿದರೆ ಅವುಗಳ ಮೇಲೆ ಇದರ ಪ್ರಭಾವ ಇರುತ್ತದೆ. ಈ ಭಯ ಅವರನ್ನು ಕಾಡಿದೆ.
‘ನಾನು ಎಲ್ಲರ ಜೊತೆ ಬೆರೆಯುತ್ತೇನೆ. ಹಾಗಿದ್ದರೂ ಕೆಲವೊಮ್ಮೆ ಪರಿಸ್ಥಿತಿ ಚಾಲೆಂಜಿಂಗ್ ಆಗಿ ಇರುತ್ತದೆ. ಎಲ್ಲರಿಗೂ ಅವರದ್ದೇ ಆದ ಸಮಯ ಬೇಕು. ಅನುಷ್ಕಾ ಹಾಗೂ ಕೊಹ್ಲಿ ತಮ್ಮ ಮಕ್ಕಳನ್ನು ಸಾಮಾನ್ಯರಂತೆ ಬೆಳೆಸಲು ಪ್ರಯತ್ನಿಸುತ್ತಾರೆ’ ಎಂದಿದ್ದಾರೆ ಶ್ರೀರಾಮ್.
ನಿಮ್ಮ ಪ್ರತಿಕ್ರಿಯೆ ಏನು?






